ಕಾರವಾರ: ಓಮಿನಿ ಹಾಗೂ ಕೆಎಸ್ಆರ್ ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಪರಿಣಾಮ ಸ್ಥಳದಲ್ಲಿಯೇ ತಂದೆ ಹಾಗೂ ಪುಟ್ಟ ಮಗ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡದ ಶಿರಸಿಯ ಗಿಡಮಾವಿನಕಟ್ಟೆಯಲ್ಲಿ ನಡೆದಿದೆ.ಚಾಳೆಗದ್ದೆ ಗ್ರಾಮದ ನಿವಾಸಿ ತಂದೆ ಸುಬ್ಬುಭದ್ರಗೌಡ (35) ಹಾಗೂ ಚಿರಾಗ್ (4) ಮೃತಪಟ್ಟ ದುರ್ದೈವಿಗಳು. ಓಮಿನಿ ಶಿರಸಿಯಿಂದ ಸಿದ್ದಾಪುರ ಮಾರ್ಗವಾಗಿ ಚಾಳಿಗದ್ದೆಗೆ ಹೋಗುತಿತ್ತು. ಇವರ ವಿರುದ್ಧ ದಿಕ್ಕಿನಿಂದ ಅಂದರೆ ಸಿದ್ದಾಪುರದಿಂದ ಶಿರಸಿ ಭಾಗಕ್ಕೆ ಸರ್ಕಾರಿ ಬಸ್ ಬರುತಿತ್ತು. ಈ ಸಂದರ್ಭದಲ್ಲಿ ಅತಿ ವೇಗದಲ್ಲಿ ಬಂದ ಸರ್ಕಾರಿ ಬಸ್ ಓಮಿನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ ಮಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಈ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


