ಬೆಂಗಳೂರು: ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ಅಭಿನಯದ ಹುಚ್ಚ ಸಿನಿಮಾ ರಿಲೀಸ್ ಆಗಿ 17 ವರ್ಷ ಕಳೆದಿದೆ. ಈಗ ಅದರ ಮುಂದುವರಿದ ಭಾಗ ಹುಚ್ಚ 2 ನಿಮ್ಮನ್ನ ರಂಜಿಸುವುದಕ್ಕೆ ಸಿದ್ಧವಾಗುತ್ತಿದೆ.ಡಾರ್ಲಿಂಗ್ ಕೃಷ್ಣ ಹುಚ್ಚ 2 ನಲ್ಲಿ ಹೀರೋ ಆಗಿ ನಟಿಸಿದ್ದಾರೆ. ಈ ಹುಚ್ಚ 2 ಸಿನಿಮಾದ ಹಾಡುಗಳನ್ನ ಕಿಚ್ಚ ರಿಲೀಸ್ ಮಾಡಿದ್ದಾರೆ. ಅನೂಪ್ ಸೀಳಿನ್ ಚಿತ್ರದ ಹಾಡುಗಳಿಗೆ ಟ್ಯೂನ್ ಕಂಪೋಸ್ ಮಾಡಿದ್ದಾರೆ.ಈ ಬಗ್ಗೆ ಮಾತನಾಡಿದ ಸುದೀಪ್, ಹುಚ್ಚ 2 ಆಡಿಯೋ ರಿಲೀಸ್ ಮಾಡಿದ್ದೇವೆ. ನನ್ನ ಸಿನಿಮಾ ರಿಲೀಸ್ ಮಾಡಿ 17 ವರ್ಷ ಆಗಿದೆ. ಆದರೆ ನನಗೆ 17 ಆಗಿದೆ ಎಂದು ಅನ್ನಿಸುತ್ತಿಲ್ಲ. ಅದರ ನೆನಪುಗಳು ಯಾವಾಗಲೂ ಅಳಿಸುವುದಿಲ್ಲ. ನಾನು ಓಂ ಪ್ರಕಾಶ್ ತುಂಬಾ ಸಿನಿಮಾ ಮಾಡಿದ್ದೇವೆ. ಆದರೆ ಈ ರೀತಿ ಮ್ಯಾಜಿಕ್ ಕ್ರಿಯೇಟ್ ಮಾಡಿಲ್ಲ. ಕೆಲವು ಸಿನಿಮಾ ಮಾತ್ರ ಈ ರೀತಿಯ ಮ್ಯಾಜಿಕ್ ಕ್ರಿಯೇಟ್ ಮಾಡುತ್ತವೆ. ಈ ಸಿನಿಮಾದಿಂದಲೇ ನಾನು ಇಲ್ಲಿವರೆಗೂ ಬಂದಿರುವುದು ಎಂದರು. ಇವತ್ತಿಗೂ ಈ ಸಿನಿಮಾವನನ್ನು ಕೈಯಲ್ಲಿ ಹಿಡಿದಿದ್ದರೆ ಇದು ನನ್ನ ಎನ್ನಿಸುತ್ತದೆ ಎಂದರು.ಈ ಸಿನಿಮಾ ಬಗ್ಗೆ ಹೇಳ ಬೇಕೆಂದರೆ ಟ್ರೈಲರ್ ತುಂಬಾ ಚನ್ನಾಗಿದೆ. ಈ ಸಿನಿಮಾ ನೋಡಿದರೆ ಹಳೇ ಓಂ ಪ್ರಕಾಶ್ ಕಾಣಿಸುತ್ತಾರೆ. ತುಂಬಾ ಖುಷಿಯಾಯಿತು. ಇದಕ್ಕೆ ಅನೂಪ್ ಸೀಳಿನ್ ಅವರು ಸಂಗೀತ ಕಂಪೋಸ್ ಮಾಡಿದ್ದಾರೆ. ಈ ಸಿನಿಮಾ ನನಗೆ ಹತ್ತಿರವಾದ ಸಿನಿಮಾವಾಗಿದೆ ಎಂದು ಹೇಳಿ ಚಿತ್ರತಂಡಕ್ಕೆ ಶುಭಾ ಹಾರೈಸಿ ಸಿನಿಮಾ ಯಶಸ್ವಿಯಾಗಲಿ ಎಂದು ಹೇಳಿದ್ದಾರೆ.ಹುಚ್ಚ – 2 ಸಿನಿಮಾದಲ್ಲಿ ದೊಡ್ಡ ತಾರಾ ಬಳಗವಿದ್ದು, ಅವಿನಾಶ್, ಸಾಯಿಕುಮಾರ್, ಸಾಧುಕೋಕಿಲಾ, ಶ್ರಾವ್ಯ, ಮಾಳವಿಕಾ ಅವಿನಾಶ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಹಾಡು, ಟ್ರೈಲರ್ ಗಳ ಬಗ್ಗೆ ಸುದೀಪ್ ತಮ್ಮ ಮೆಚ್ಚುಗೆಯನ್ನು ಹೇಳಿಕೊಂಡಿದ್ದಾರೆ.Sign in to your account
Username or Email Address


Password

 Remember Me


