ಮೈಸೂರು: ಟಿ. ನರಸೀಪುರ ರಸ್ತೆಯ ದೊಡ್ಡ ಅಲದ ಮರದ ತಿರುವಿನ ಬಳಿ ಎರಡು ಬಸ್ ಮತ್ತು ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟು 40 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.ಘಟನೆಯಲ್ಲಿ ಮಹೇಶ್ (11) ವಿಶ್ವ (35) 50 ವರ್ಷದ ಮಹಿಳೆ ಹಾಗೂ 35 ವರ್ಷದ ಪುರುಷ ಮೃತಪಟ್ಟಿದ್ದಾರೆ. ಮೈಸೂರು ತಾಲ್ಲೂಕಿನ ಚಿಕ್ಕಹಳ್ಳಿ ಗ್ರಾಮದ ಬಳಿಯ ತಿರುವಿನಲ್ಲಿ ಮೈಸೂರಿನಿಂದ ಟಿ.ನರಸೀಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ ಪಲ್ಟಿಯಾಗಿದ್ದ ಬಸ್‍ಗೆ ಇನ್ನೊಂದು ಬಸ್ ಕೂಡ ಡಿಕ್ಕಿಯಾಗಿದೆ.ಘಟನೆಯಲ್ಲಿ ಬಸ್ಸುಗಳ ಮಧ್ಯೆ ಸಿಲುಕಿದವರು ನಜ್ಜುಗುಜ್ಜಾಗಿದ್ದಾರೆ. ಅಪಘಾತದಲ್ಲಿ 44 ಕ್ಕು ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೈಸೂರಿನ ಸಿದ್ದಾರ್ಥನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


