ಬೆಂಗಳೂರು: ಸಿನಿಮಾ ಅಂದಮೇಲೆ ಕಿಸ್ಸಿಂಗ್ ದೃಶ್ಯಗಳು ಸಾಮಾನ್ಯ. ಹಾಗೇ ಗುಳಿಕೆನ್ನೆ ಬೆಡಗಿ ನಟಿ ರಚಿತಾ ರಾಮ್ ಜೊತೆ ಲಿಪ್‍ಲಾಕ್ ಮಾಡುತ್ತೀನಿ ಎಂದು ಸ್ಯಾಂಡಲ್ ವುಡ್ ನಟರೊಬ್ಬರು ಹೇಳಿದ್ದಾರೆ.ರಚಿತಾ ರಾಮ್ ಸ್ಯಾಂಡಲ್‍ ವುಡ್‍ನ ಟಾಪ್ ಸ್ಟಾರ್ ಗಳ ಜೊತೆ ತೆರೆ ಹಂಚಿಕೊಂಡು ಯಶಸ್ವಿಯಾಗಿದ್ದಾರೆ. ಈಗ ಇವರಿಗೆ ಥೇಟರ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ `ಟಗರು’ ಸಿನಿಮಾದ ಡಾಲಿ ಅಲಿಯಾಸ್ ಧನಂಜಯ್ ಅವರು ಲಿಪ್ ಲಾಕ್ ಮಾಡುತ್ತೇನೆ ಎಂದು ಹೇಳಿದ್ದಾರೆ.ಖಾಸಗಿ ವಾಹಿನಿಯಲ್ಲಿ ‘ನಂ 1 ಯಾರಿ’ ವಿತ್ ಶಿವಣ್ಣ ಕಾರ್ಯಕ್ರಮಕ್ಕೆ ‘ಟಗರು’ ಸಿನಿಮಾದಲ್ಲಿ ನಟಿಸಿದ್ದ ಧನಂಜಯ್, ವಸಿಷ್ಠ ಮತ್ತು ಮಾನ್ವಿತಾ ಹರೀಶ್ ಬಂದಿದ್ದರು. ಈ ವೇಳೆ ಟಗರು ಶಿವ ಶಿವರಾಜ್ ಕುಮಾರ್ ಕೇಳಿರುವ ತರ್ಲೆ ಪ್ರಶ್ನೆಗಳಿಗೆ ಡಾಲಿ, ಚಿಟ್ಟೆ ಉತ್ತರ ನೀಡಿದ್ದಾರೆ. ಅದರಲ್ಲಿಯೂ ಲಿಪ್ ಲಾಕ್ ದೃಶ್ಯದ ಬಗ್ಗೆ ಧನಂಜಯ್ ಯಾವುದೇ ಮುಜುಗರ, ಸಂಕೋಚ ಇಲ್ಲದೆ ಮಾತನಾಡಿದ್ದಾರೆ.ಕಾರ್ಯಕ್ರಮದ ಕೊನೆಯ ಸುತ್ತಿನಲ್ಲಿ ಶಿವಣ್ಣ `ಆನ್ ಸ್ಕ್ರೀನ್ ನಲ್ಲಿ ನಿಮಗೆ ಯಾರ ಜೊತೆಗೆ ಲಿಪ್ ಲಾಕ್ ಮಾಡಬೇಕು ಅಂತ ಆಸೆ ಇದೆ?’ ಎಂದು ಧನಂಜಯ್ ಗೆ ಪ್ರಶ್ನೆ ಕೇಳಿದ್ದಾರೆ. ಆಗ ಧನಂಜಯ್ ದೀಪಿಕಾ ಪಡುಕೋಣೆ ಎಂದು ಹೇಳಿದ್ದರು. ಮತ್ತೆ ಶಿವಣ್ಣ ‘ಓಕೆ ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ, ಆದರೆ ಕನ್ನಡದಲ್ಲಿ ಯಾರು?” ಎಂದು ಕೇಳಿದರು. ಆಗ ಧನಂಜಯ್ ರಚಿತಾ ರಾಮ್ ಅವರ ಹೆಸರನ್ನು ಹೇಳಿದ್ದಾರೆ.






 Advertisement 




Sign in to your account
Username or Email Address


Password

 Remember Me


