ದಾವಣಗೆರೆ: ಗಣಿತ ವಿಷಯದಲ್ಲಿ ಕಡಿಮೆ ಅಂಕಗಳು ಬರುತ್ತವೆ ಎಂದು ಪಿಯುಸಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ದಾವಣಗೆರೆ ನಗರದ ಮಣಿಕಂಠ ಸರ್ಕಲ್ ಬಳಿ ನಡೆದಿದೆ.ಕಾವ್ಯ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಳು. ಆದರೆ ಮಣಿಕಂಠ ಸರ್ಕಲ್ ಬಳಿ ಇರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.ಕಾವ್ಯ ಇತ್ತೀಚೆಗೆ ನಡೆದ ಪಿಯುಸಿ ಗಣಿತ ವಿಷಯ ಪರೀಕ್ಷೆ ಬರೆದು ಬಂದಿದ್ದಳು. ಆದರೆ ಗಣಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರಬಹುದು ಎಂದು ಹೆದರಿಕೊಂಡಿದ್ದಾಳೆ. ಹೀಗಾಗಿ ಪರೀಕ್ಷೆ ಬರೆದು ಬಂದು ಮನೆಯಲ್ಲಿ ಅಂಕಗಳ ಲೆಕ್ಕ ಹಾಕಿದಾಗ ಕಡಿಮೆ ಆಗುವುದನ್ನು ಖಚಿತಪಡಿಸಿಕೊಂಡು ನಂತರ ನೇಣಿಗೆ ಶರಣಾಗಿದ್ದಾಳೆ ಎಂದು ಪೋಷಕರು ತಿಳಿಸಿದ್ದಾರೆ.ಈ ಘಟನೆ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


