ಕಲಬುರಗಿ: ನಗರದ ಸಿದ್ಧಿಬಾಷ ದರ್ಗಾದ ಬಳಿ ಪ್ಲಾಸ್ಟಿಕ್ ಚೀಲವೊಂದರಲ್ಲಿ ಎರಡು ದಿನದ ನವಜಾತ ಗಂಡು ಶಿಶು ಪತ್ತೆಯಾಗಿದೆ.ಸ್ಥಳೀಯರು ಶಿಶು ಮೃತಪಟ್ಟಿದೆಯೆಂದು ತೆಗೆಯಲು ಹೋದಾಗ, ಜೀವಂತವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಗಳವಾರ ತಡರಾತ್ರಿ ಮಗುವನ್ನು ಬಿಸಾಕಿದ್ದಾರೆ ಎಂದು ಶಂಕಿಸಲಾಗಿದೆ.ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಆಂಬುಲೆನ್ಸ್ ಮೂಲಕ ಸ್ಥಳಕ್ಕೆ ಬಂದು ಚಿಕಿತ್ಸೆಗೆಂದು ಶಿಶುವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಎಳೆಮಗುವನ್ನು ಕ್ಯಾರಿಬ್ಯಾಗ್‍ನಲ್ಲಿ ಕಟ್ಟಿಬಿಸಾಕಿದ ಪಾಪಿ ಪೋಷಕರಿಗೆ ಸ್ಥಳಿಯರು ಹಿಡಿಶಾಪ ಹಾಕಿದ್ದಾರೆ.ಈ ಘಟನೆ ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.






 Advertisement 




Sign in to your account
Username or Email Address


Password

 Remember Me


