ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವಿರುದ್ಧ ದಲಿತ ಸಂಘಟನೆಗಳಿಂದ ವಿಶಿಶ್ಟ ಬೌ..ಬೌ.., ಹಚ್..ಹಚ್ ಪ್ರತಿಭಟನೆ ನಡೆಸಲಾಯಿತು.ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರ ಎದುರು ಜಮಾಯಿಸಿದ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಅನಂತಕುಮಾರ್ ಹೆಗ್ಡೆ ಅವರನ್ನ ನಾಯಿಗೆ ಹೋಲಿಸಿ ಹಚ್ ಹಚ್ ಎಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕೋಡಿ ತಾಲೂಕಿನ ವಿವಿಧ ಕಾರ್ಯಕ್ರಮ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವ ಹೆಗ್ಡೆ ಭಾಗಿಯಾಗಲಿದ್ದಾರೆ ಎಂದು ಸುದ್ದಿ ತಿಳಿದು ಕಪ್ಪು ಬಾವುಟ ಪ್ರದರ್ಶನ ಮಾಡಲು ದಲಿತ ಸಂಘಟನೆಗಳ ಕಾರ್ಯಕರತರು ಮುಂದಾಗಿದ್ದರು.ಕೆಲ ಸಮಯದ ಬಳಿಕ ಸಚಿವರು ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ ಎಂಬ ವಿಷಯ ತಿಳಿದ ಕಾರ್ಯಕರ್ತರು, ಗೋ ಬ್ಯಾಕ್, ಗೋ ಬ್ಯಾಕ್ ಅಂತಾ ಸಚಿವ ಹೆಗ್ಡೆ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಸಂವಿಧಾನ ಬದಲಾಯಿಸಲು ನಾವು ಬಂದಿದ್ದು ಹಾಗೂ ಬೀದಿಯಲ್ಲಿ ಬೊಗಳುವ ನಾಯಿಗೆ ತಲೆ ಕೆಡಿಸಿಕೊಳಲ್ಲ ಎಂದು ಸಚಿವ ಹೆಗ್ಡೆ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಇನ್ನೂ ಈ ಸಂದರ್ಭದಲ್ಲಿ ನೈತಿಕತೆ ಇದ್ದರೆ ಸಚಿವ ಅನಂತಕುಮಾರ್ ಹೆಗ್ಡೆ ರಾಜೀನಾಮೆ ನೀಡಬೇಕು ಎಂದು ಮುಖಂಡರು ಆಗ್ರಹಿಸಿದರು.Sign in to your account
Username or Email Address


Password

 Remember Me


