ಬೆಂಗಳೂರು: ಪ್ರೀತಿಸಲಿಲ್ಲ ಎಂದು ವ್ಯಕ್ತಿಯೊಬ್ಬ ವಿವಾಹಿತ ಮಹಿಳೆಗೆ ಬಿಯರ್ ಬಾಟಲಿನಿಂದ ಹಲ್ಲೆ ಮಡಿದ ಘಟನೆ ಬೆಂಗಳೂರಿನ ಕೆ.ಜಿ ನಗರದಲ್ಲಿ ನಡೆದಿದೆ.ರಜನಿಕಾಂತ್ ಎಂಬಾತನೇ ಮಹಿಳೆಯ ಹಲ್ಲೆ ಮಾಡಿದ ಪಾಗಲ್ ಪ್ರೇಮಿ. ಈತ ಮೂಲತಃ ಪಾಂಡವಪುರದ ನಿವಾಸಿಯಾಗಿದ್ದು, ವಿವಾಹಿತ ಮಂಜುಳಾ (ಹೆಸರು ಬದಲಾಯಿಸಿದೆ)ರನ್ನು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದನು. ಇವನ ಪ್ರೀತಿ ನಿರಾಕರಿಸಿದ್ದಕ್ಕೆ ಕೆರಳಿದ ರಜನಿಕಾಂತ್ ಮಂಜುಳಾರ ಬೆನ್ನಿಗೆ ಬೀರ್ ಬಾಟಲ್‍ನಿಂದ ಚುಚ್ಚಿದ್ದಾನೆ.ಸೋಮವಾರ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಂಜುಳಾರನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಘಟನೆಗೆ ಸಂಬಂಧಿಸಿದಂತೆ ಕೆ.ಜಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.Sign in to your account
Username or Email Address


Password

 Remember Me


