ಬೆಂಗಳೂರು: ಕರ್ತವ್ಯಲೋಪದಡಿ ಅಮಾನತಾಗಿದ್ದ ಕಬ್ಬನ್ ಪಾರ್ಕ್ ಎಸಿಪಿ ಮಂಜುನಾಥ್ ತಳವಾರ್ ಅವರ ಅಮಾನತು ವಾಪಸ್ ಪಡೆಯಲಾಗಿದೆ.ನಲಪಾಡ್ ಗೂಂಡಾಗಿರಿ ಪ್ರಕರಣದಲ್ಲಿ ಪೊಲೀಸ್ ಆಯುಕ್ತರು ಮಂಜುನಾಥ್ ತಳವಾರ್ ರನ್ನು ಅಮಾನತುಗೊಳಿಸಿದ್ರು. ಇದೀಗ ಅಮಾನತು ವಾಪಸ್ ಪಡೆಯಲಾಗಿದ್ದು, ಗೃಹಸಚಿವ ರಾಮಲಿಂಗಾರೆಡ್ಡಿ ಹ್ಯಾರಿಸ್ ಒತ್ತಡಕ್ಕೆ ಮಣಿದರಾ ಎಂಬಂತಹ ಅನುಮಾನಗಳು ವ್ಯಕ್ತವಾಗಿದೆ.ನಲಪಾಡ್ ಗ್ಯಾಂಗ್ ಗೆ ಇಂದು ಜೈಲು ಭವಿಷ್ಯ ನಿರ್ಧಾರವಾಗಲಿದೆ. ಜಾಮೀನು ಕೋರಿ ನಲಪಾಡ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಏಕಸದಸ್ಯ ಪೀಠದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ನಲಪಾಡ್ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಲಿದ್ದಾರೆ. ಆರೋಪಿ ನಲಪಾಡ್ ಗೆ ಜೈಲಾ ಅಥವಾ ಬೇಲಾ ಇಂದು ನಿರ್ಧಾರವಾಗಲಿದೆ.Sign in to your account
Username or Email Address


Password

 Remember Me


