ಬೆಂಗಳೂರು: ಅಕ್ರಮ ಸಂಬಂಧ ಇದೆ ಎಂದು ಪತಿ ಶಂಕಿಸಿದ ಹಿನ್ನೆಲೆಯಲ್ಲಿ ಟೆಕ್ಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಭುವನೇಶ್ವರಿನಗರದಲ್ಲಿ ನಡೆದಿದೆ.ತುಳಸಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಇವರು ವಿಪ್ರೋ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಪತಿ ವಿಜಯ ಕಿರಣ್ ಪತ್ನಿ ತುಳಸಿ ಮೇಲೆ ಯಾವಾಗಲೂ ಅನುಮಾನ ಪಡುತ್ತಿದ್ದ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯ್ ಹಾಗೂ ತುಳಸಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.ಭಾನುವಾರ ರಾತ್ರಿಯೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದೆ. ಇದರಿಂದ ಮನನೊಂದು ತುಳಸಿ ನೇಣು ಬಿಗಿದುಕೊಂಡಿದ್ದಾರೆ. ಕೂಡಲೇ ಬಾಗಿಲು ಒಡೆದು ಒಳಹೋಗಿದ್ದ ವಿಜಯ್, ಯೋಗಾನಂದ ಆಸ್ಪತ್ರೆಗೆ ತುಳಸಿಯನ್ನ ಕರೆದೊಯ್ದಿದ್ದ. ಆದ್ರೆ ತುಳಸಿ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯಲ್ಲಿ ವೈದ್ಯರು ಹೇಳಿದ್ದಾರೆ.ನಂತರ ವಿಜಯ್ ಮತ್ತೆ ಶವವನ್ನ ತಂದು ಮನೆಯ ಸೋಫಾ ಮೇಲೆ ಹಾಕಿ ಕುಳಿತ್ತಿದ್ದ. ಇದಾದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.Sign in to your account
Username or Email Address


Password

 Remember Me


