ಬಳ್ಳಾರಿ: ರಾಜಕಾರಣಿಗಳು ಆಡುತ್ತಿರುವ ಭಾಷೆ ಭಯೋತ್ಪಾದನೆಯನ್ನು ಬಿತ್ತುವಂತಿದೆ ಎಂದು ಹೇಳುವ ಮೂಲಕ ಹಂಪಿ ಕನ್ನಡ ವಿವಿ ಕುಲಪತಿ ಮಲ್ಲಿಕಾ ಘಂಟಿ ವಿವಾದದ ಕಿಡಿ ಹೊತ್ತಿಸಿದ್ದಾರೆ.ವಿವಿಯ 26ನೇ ನುಡಿಹಬ್ಬದ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ರಾಜಕಾರಣಿಗಳು ದೇಶದುದ್ದಕ್ಕೂ ಆಡುತ್ತಿರುವ ಭಾಷೆ ಭಯೋತ್ಪಾದನೆಯನ್ನು ಬಿತ್ತುವಂತಿದೆ. ಈ ಭಾಷೆಯನ್ನು ಹೇಗೆ ಸರಿಪಡಿಸಬೇಕು. ದೇಶ, ಭಾಷೆ, ಬದುಕು ಬಿಕ್ಕಟ್ಟಿನಲ್ಲಿದೆ. ಇದನ್ನ ಸರಿಪಡಿಸುವವರು ಯಾರು ಅಂತಾ ಪರೋಕ್ಷವಾಗಿ ರಾಜಕೀಯ ನಾಯಕರ ವಿರುದ್ಧ ಹರಿಹಾಯ್ದರು.ರಾಜಕಾರಣಿಗಳು ಆಡುವ ಭಾಷೆಯನ್ನು ಹೇಗೆ ಸರಿಪಡಿಸಬೇಕಿದೆ ಮತ್ತು ಯಾರು ಸರಿಪಡಿಸಬೇಕೆಂಬ ಪ್ರಶ್ನೆ ನಮ್ಮ ಮುಂದಿದೆ. ದೇಶ, ಭಾಷೆ ಬಿಕ್ಕಟ್ಟಿನಲ್ಲಿರುವಾಗ ಸಾಮಾನ್ಯ ಜನರು ಎಚ್ಚೆತ್ತುಕೊಳ್ಳಬೇಕಿದೆ. ಈ ಭಾಷೆಯನ್ನು ನಿಯಂತ್ರಿಸುವ ಶಕ್ತಿ ಸಾಹಿತ್ಯಕ್ಕಿದೆ. ರಾಜಕಾರಣಿಗಳು ಆಡುವ ಭಾಷೆ ಹಿತ ಮಿತವಾಗಿರಬೇಕು ಎಂಬ ಸಲಹೆಯನ್ನು ನೀಡಿದ್ರು.Sign in to your account
Username or Email Address


Password

 Remember Me


