ರಾಮನಗರ: ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಅಗ್ನಿ ಅವಘಡದಿಂದಾಗಿ ಮರದ ಅಂಗಡಿ ಸೇರಿದಂತೆ ನಾಲ್ಕು ಅಂಗಡಿಗಳು ಭಸ್ಮವಾಗಿರುವ ಘಟನೆ ಚನ್ನಪಟ್ಟಣದ ಸಾತನೂರು ಸರ್ಕಲ್ ಬಳಿ ನಡೆದಿದೆ.ಶುಕ್ರವಾರ ತಡರಾತ್ರಿ ಸುಮಾರು 3 ಗಂಟೆಗೆ ಕಾರ್ಪೆಂಟರ್ (ಮರಕೆತ್ತನೆ) ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಬೆಂಕಿ ಅಂಗಡಿಯಲ್ಲಿನ ಮರದ ಚಕ್ಕೆ ಗೆ ಬಿದ್ದು ಬೆಂಕಿ ಹೊತ್ತಿದೆ. ಪರಿಣಾಮ ಅಂಗಡಿಗೆ ಹೊತ್ತಿಕೊಂಡ ಬೆಂಕಿ ಅಕ್ಕಪಕ್ಕದ ನಾಲ್ಕು ಅಂಗಡಿಗಳಿಗೂ ಸಹ ವ್ಯಾಪಿಸಿ ಹೊತ್ತಿ ಉರಿದಿದೆ.ಚನ್ನಪಟ್ಟಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದಾರೆ. ಘಟನೆ ಸಂಬಂಧ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


