ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯದಲ್ಲಿ ಅತೀ ಅಪರೂಪದ ಬ್ಲೂ ಬುಲ್ ಪ್ರಾಣಿಯೊಂದು ಪ್ರತ್ಯಕ್ಷವಾಗಿದೆ.ಶುಕ್ರವಾರ ಪ್ರವಾಸಿಗರು ಮುತ್ತೋಡಿ ಅರಣ್ಯದಲ್ಲಿ ಸಫಾರಿಗೆ ಹೋಗಿದ್ದ ವೇಳೆ ಈ ಅಪರೂಪದ ಬ್ಲೂ ಬುಲ್ ಪ್ರಾಣಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭದ್ರಾ ಮುತ್ತೋಡಿ ಅರಣ್ಯದಲ್ಲಿ ಈ ಹಿಂದೆ ಬ್ಲೂ ಬುಲ್ ಪ್ರಾಣಿ ಕಂಡಿರಲಿಲ್ಲ. ಈ ಪ್ರಾಣಿ ಇರುವ ಬಗ್ಗೆ ಯಾರ ಗಮನಕ್ಕೂ ಬಂದಿರಲಿಲ್ಲ.ಕೇವಲ ಹುಲ್ಲುಗಾವಲಲ್ಲಿ ವಾಸಿಸುವ ಪ್ರಾಣಿ ಇದಾಗಿದ್ದು, ಯಾರೋ ತಂದು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. 1950 ರಲ್ಲಿ ಬಂಡೀಪುರ ಅರಣ್ಯದಲ್ಲಿ ಕಾಣಿಸಿಕೊಂಡಿತ್ತು. ಈ ಪ್ರಾಣಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಮಾತ್ರ ಹೆಚ್ಚಾಗಿವೆ ಕಂಡುಬರುತ್ತದೆ. ಇದನ್ನ ನೀಲ್ ಗಾಯ್ ಎಂತಲೂ ಕರೆಯುತ್ತಾರೆ.ಹುಲಿ ಹಾಗೂ ಚಿರತೆಯಂತಹ ಮಾಂಸಾಹಾರಿ ಪ್ರಾಣಿಗಳ ಕಣ್ಣಿಗೆ ಬಿದ್ದರೆ ಇದನ್ನ ಸುಲಭವಾಗಿ ಬೇಟೆ ಆಡುತ್ತವೆ. ಈ ಪ್ರಾಣಿ ಕಾಡಿನೊಳಗೆ ಬಹಳ ದಿನ ಬದುಕುವುದು ಕಷ್ಟ. ಆದ್ದರಿಂದ ಕೂಡಲೇ ಇದನ್ನ ಪತ್ತೆ ಮಾಡಿ ರಕ್ಷಣೆ ಮಾಡಿ ಎಂದು ಅರಣ್ಯ ಸಿಬ್ಬಂದಿಗೆ ಭದ್ರಾ ಹುಲಿ ಯೋಜನೆ ನಿರ್ದೇಶಕ ಕಾಂತರಾಜ್ ಸೂಚನೆ ನೀಡಿದ್ದಾರೆ.Sign in to your account
Username or Email Address


Password

 Remember Me


