ಬೆಂಗಳೂರು: ಬಹು ಮಹಡಿ ಕಟ್ಟಡದಲ್ಲಿ ಶೌಚಾಲಯದ ಪೈಪ್ ಕ್ಲೀನ್ ಮಾಡಲು ಹೋಗಿ ಹೈಟೆಕ್ಷನ್ ತಂತಿ ಮೂಲಕ ವಿದ್ಯುತ್ ಸ್ಪರ್ಶಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೆಕೊಳಲ ಗ್ರಾಮದಲ್ಲಿ ನಡೆದಿದೆ.ಮನೆ ಮಾಲಿಕ ವೀರಪ್ಪ(75) ಹಾಗೂ ಕೊಲ್ಕತ್ತಾ ಮೂಲದ ಕೂಲಿ ಕಾರ್ಮಿಕ ಮೋಹನ್ ಮಹಾಂತ್(50) ಸಾವಿಗೀಡಾದ ದುರ್ದೈವಿಗಳಾಗಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ.ಮೂವರು ಮನೆಯ ಶೌಚಾಲಯ ಕ್ಲೀನ್ ಮಾಡುತ್ತಿದ್ದ ವೇಳೆ ಮನೆಯ ಪಕ್ಕದಲ್ಲಿ ಹಾದು ಹೋಗಿದ್ದ ಹೈಟೆಕ್ಷನ್ ತಂತಿಗೆ ಕಬ್ಬಿಣದ ರಾಡ್ ತಾಗಿ ವಿದ್ಯುತ್ ಹರಿದು ಈ ಅವಘಡ ಸಂಭವಿಸಿದೆ.ವಿಷಯ ತಿಳಿದ ಮಾರತ್ತಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.Sign in to your account
Username or Email Address


Password

 Remember Me


