ಬೆಂಗಳೂರು: ವಿಶ್ವ ಮಹಿಳಾ ದಿನಚಾರಣೆ ಅಂಗವಾಗಿ ಬೆಂಗಳೂರು ಹೊರವಲಯ ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟ ಪ್ರೇಮ್ ಕುಣಿದು ಕುಪ್ಪಿಳಿಸಿದ್ದಾರೆ.ಸಪ್ತಗಿರಿ ಸಂಕಲ್ಪ 2018ರ ಕಾರ್ಯಕ್ರಮವನ್ನ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಈ ವೇಳೆ ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳು ತಂದೆ, ತಾಯಿ, ಗುರು- ಹಿರಿಯರು ಸೇರಿದಂತೆ ರಾಜ್ಯ, ದೇಶದ ಬಗ್ಗೆ ಕಾಳಜಿ ತೋರುವ ನಿಟ್ಟಿನಲ್ಲಿ ಉತ್ತಮ ಮನುಷ್ಯರಾಗಿ ಬೆಳೆಯಿರಿ ಎಂದು ಹೇಳಿದರು.ವಿದ್ಯಾಭ್ಯಾಸದ ನಂತರ ವಿದೇಶಕ್ಕೆ ತೆರಳದೆ ನಾಡುನುಡಿಯ ಸೇವೆಯ ಜೊತೆ ಉತ್ತಮ ಜೀವನ ನಡೆಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಂತರ ವಿದ್ಯಾರ್ಥಿಗಳನ್ನ ಮನರಂಜಿಸಲು ಕಾಲೇಜು ವಿದ್ಯಾರ್ಥಿನಿಯರ ಜೊತೆ ಚೌಕ ಚಿತ್ರದ ಹಾಡಿಗೆ ಪ್ರೇಮ್ ಹೆಜ್ಜೆ ಹಾಕಿದರು.ಇದೇ ವೇಳೆ ಕಾಲೇಜು ಆಡಳಿತ ಮಂಡಳಿಯಿಂದ ಸಾಧನೆ ಮಾಡಿದ ವಿಶೇಷ ಮಹಿಳೆಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ನಟ ಪ್ರೇಮ್ ಹಾಡಿಗೆ ಹಾಗೂ ಇನ್ನಿತರ ಕನ್ನಡ ಹಾಡುಗಳಿಗೆ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಖತ್ತಾಗಿ ಕುಣಿದು ಕುಪ್ಪಳಿಸಿ ಸಂತಸಪಟ್ಟರು.Sign in to your account
Username or Email Address


Password

 Remember Me


