ಬೆಂಗಳೂರು: ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಜೊತೆ ವಿವಾಹವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ್ ಅವರ ಪುತ್ರಿ ಲಕ್ಷ್ಮೀ ನಾಯ್ಕ್ ವಿಡಿಯೋದಲ್ಲಿ ಸ್ಪಷ್ಟನೆ ನೀಡಿದ್ದಾರೆ.ನಿರ್ಮಾಪಕ ಸುಂದರ್ ಗೌಡ ಪತ್ನಿ ಲಕ್ಷ್ಮೀನಾಯ್ಕ್, “ನಾನು ಸುಂದರ್ ಗೌಡ್ರು ಇಬ್ಬರು ಇಷ್ಟ ಪಟ್ಟು ಮದುವೆಯಾಗಿರುವುದು. ನಮ್ಮಿಂದ ಯಾರಿಗೂ ಏನೋ ತೊಂದರೆ ಆಗಬಾರದು, ಹಾನಿಯಾಗಬಾರದು. ನಾನು ಇಷ್ಟ ಪಟ್ಟು ಮನಸಾರೆ ಮದುವೆಯಾಗಿದ್ದೀನಿ. ಇದಕ್ಕೆ ನನಗೆ ಯಾವುದೇ ಅಭ್ಯಂತರವಿಲ್ಲ. ಯಾರೂ ಫೋರ್ಸ್ ಮಾಡಿಲ್ಲ. ನಾನು ನನ್ನ ಸ್ವಂತ ನಿರ್ಧಾರದಿದಲೇ ಮದುವೆಯಾಗಿದ್ದೇನೆ. ನಾನು ಮೈನರ್ ಕೂಡ ಅಲ್ಲಾ ನಾನು ಮೇಜರ್. ನನಗೆ ಯೋಚನೆ ಮಾಡುವ ಬುದ್ಧಿ ಇದೆ. ನಾನು ಖುಷಿಯಿಂದ ಮದುವೆಯಾಗಿದ್ದೀನಿ. ಇವರ ಜೊತೆ ಸಂತಸದಿಂದ ಜೀವನ ಮಾಡುತ್ತೇನೆ” ಎಂದು ಹೇಳಿದ್ದಾರೆ.ನವ ವಧು-ವರರರು ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ನೀಡಿದ್ದಾರೆ. ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾದ ಮೇಲೆ ಸುಂದರ್ ಗೌಡ ಕುಟುಂದವರು ಫೋನ್ ಟ್ರಾಪ್ ಮಾಡಿ ಹುಡುಕಾಟ ಮಾಡುತ್ತಿದ್ದರು. ಇದಕ್ಕೆಲ್ಲಾ ಸ್ಪಷ್ಟನೆ ಕೊಡಬೇಕಾಗಿತ್ತು. ಆದ್ದರಿಂದ ಲಕ್ಷ್ಮಿ ನಾಯ್ಕ್ ಅವರು ವಿಡಿಯೋ ಮಾಡಿ ಸಂದೇಶ ನೀಡಿದ್ದಾರೆ.ಮಾಸ್ತಿಗುಡಿ ನಿರ್ಮಾಪಕ ಸುಂದರ್ ಹಾಗೂ ಶಾಸಕರ ಪುತ್ರಿ ಕಳೆದ ಆರು ತಿಂಗಳಿನಿಂದ ಪ್ರೀತಿ ಮಾಡುತ್ತಿದ್ದರು. ಶಾಸಕರ ಯಲಹಂಕ ನ್ಯೂಟೌನ್ ಮನೆಯಿಂದ ಪುತ್ರಿ ನಾಪತ್ತೆಯಾಗಿದ್ದು, ಈ ಬಗ್ಗೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ ಎರಡು ವಿಶೇಷ ತಂಡಗಳಿಂದ ಶಾಸಕರ ಪುತ್ರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಸುಂದರ್ ಮತ್ತು ಲಕ್ಷ್ಮೀ ನಾಯ್ಕ್ ಇವತ್ತು ಚಾಮುಂಡಿಬೆಟ್ಟದಲ್ಲಿ ಮದ್ವೆಯಾಗಿದ್ದಾರೆ. ಹುಡುಗಿಯ ಪೋಷಕರು ಕೂಡ ಜೊತೆಯಲ್ಲಿಯೇ ಇದ್ದು, ಶಾಸಕರಿಗೆ ಮದುವೆ ಇಷ್ಟವಿಲ್ಲದ ಕಾರಣ ರಾತ್ರಿ ಮನೆ ಬಿಟ್ಟು ಹೋಗಿ, ಇಂದು ನಿರ್ಮಾಪಕ ಸುಂದರ್ ಜೊತೆ ಮದುವೆ ಮಾಡಿಕೊಂಡಿದ್ದಾರೆ.






 Advertisement 




Sign in to your account
Username or Email Address


Password

 Remember Me


