ಕಾರವಾರ: ಟ್ಯಾಂಕರ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಓರ್ವ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಬಳಿ ನಡೆದಿದೆ.ಅಪಘಾತದಲ್ಲಿ ಅಣ್ಣಪ್ಪ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ. ಮುರುಡೇಶ್ವರ ಬಳಿಯ ಮಾವಿನಕಟ್ಟೆ ಕ್ರಾಸ್‍ನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಅಪಾಘತ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಮೂರು ಮಕ್ಕಳು ಸೇರಿ ಆರು ಜನರಿಗೆ ಗಾಯಗೊಂಡಿದ್ದಾರೆ.ಉಪ್ಪುಗುಂದ ಮೂಲದ ಕಾರು ಕುಂದಾಪುರದಿಂದ ಶಿರಸಿಗೆ ಹೋಗುತಿತ್ತು. ಟ್ಯಾಂಕರ್ ಭಟ್ಕಳ ಭಾಗಕ್ಕೆ ಬರುತ್ತಿತ್ತು. ಈ ವೇಳೆ ಮುರುಡೇಶ್ವರ ಬಳಿಯ ಮಾವಿನಕಟ್ಟೆ ಕ್ರಾಸ್‍ನ ಬಳಿ ಟ್ಯಾಂಕರ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಅಪಘಾತದಲ್ಲಿ ಪ್ರಭಾಕರ್, ನಾಗವೇಣಿ, ಸುಬ್ರಹ್ಮಣ್ಯ, ಮುಕುಂದ ತೀವ್ರವಾಗಿ ಗಾಯಗೊಂಡವರಾಗಿದ್ದು, ಗಾಯಾಳುಗಳನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಮೂರು ಜನರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯಾಂಕರ್ ನಲ್ಲಿ ಸುಮಾರು 4000 ಲೀ. ಪೆಟ್ರೋಲ್ ಮತ್ತು 8000 ಡೀಸೆಲ್ ಇದ್ದುದ್ದರಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನಗಳ ಓಡಾಟ ಸ್ಥಗಿತಗೊಳಿಸಲಾಗಿದೆ.ಈ ಸಂಬಂಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


