ಮಡಿಕೇರಿ: ರಾಜ್ಯ ಸರ್ಕಾರದ ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ಸಾಕಷ್ಟು ಮಹಿಳೆರಿಗೆ ತಲುಪಿಲ್ಲ. ಅದರಲ್ಲೂ ಕೊಡಗು (Kodagu) ಜಿಲ್ಲೆಯಲ್ಲಿ ಸುಮಾರು 19 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಯೋಜನೆಯ ಹಣ ತಲುಪಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.ಆಧಾರ್‌ ಮತ್ತು ಬ್ಯಾಂಕ್‌ ಖಾತೆ ಜೋಡಣೆಯಲ್ಲಿ ವ್ಯತ್ಯಾಸ ಮತ್ತಿತರ ಕಾರಣಗಳಿಂದಾಗಿ ಕಾಂಗ್ರೆಸ್‌ ಗ್ಯಾರಂಟಿಗಳಲ್ಲಿ (Congress Guarantee) ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಈವರೆಗೆ ಕೊಡಗು ಜಿಲ್ಲೆಯ 19,606 ಮಹಿಳೆಯರಿಗೆ ಹಣ ತಲುಪಿಲ್ಲ. ಇದನ್ನೂ ಓದಿ: Breaking: ಲಂಚ ಪಡೆಯುವಾಗಲೇ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ED ಅಧಿಕಾರಿಗಳು ಅರೆಸ್ಟ್‌ಜಿಲ್ಲೆಯಲ್ಲಿ ಒಟ್ಟು 1,31,863 ಫಲಾನುಭವಿಗಳಿದ್ದು, ಅವರಲ್ಲಿ 1,12,257 ಗೃಹಲಕ್ಷ್ಮಿ ಯೋಜನೆ ಹಣ ತಲುಪಿದೆ. ಮೊದಲ ಹಂತದಲ್ಲಿ 91,840 ಮಹಿಳೆಯರಿಗೆ ಒಟ್ಟು 18.36 ಕೋಟಿ ರೂ.ನಷ್ಟು ಹಣ ಜಮೆಯಾಗಿದೆ. 2ನೇ ಹಂತದಲ್ಲಿ 1,01,466 ಮಹಿಳೆಯರಿಗೆ ಒಟ್ಟು 20.29 ಕೋಟಿ ರೂ. ಹಣ ಜಮೆಯಾಗಿದೆ.ಇನ್ನೂ 19,606 ಮಹಿಳೆಯರಲ್ಲಿ ಸರಿಸುಮಾರು 9 ಸಾವಿರ ಮಹಿಳೆಯರು ಜಿಲ್ಲೆಯಿಂದ ಹೊರಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ಅಂತಹ ಮಹಿಳೆಯರನ್ನು ಗುರುತು ಮಾಡಲಾಗಿದ್ದು, ಅಂಗನವಾಡಿ ಕಾರ್ಯಕರ್ತರಿಗೆ ಮಾಹಿತಿ ನೀಡಿದೆ. ಅವರನ್ನು ಪತ್ತೆ ಮಾಡಿ ಯೋಜನೆ ತಲುಪಿಸುವ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಿದೆ. ಇದನ್ನೂ ಓದಿ: ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ: ನಿತೀಶ್‌ ಕುಮಾರ್‌ ಬೇಸರಇದರ ಹೊರತಾಗಿಯೂ ಅನೇಕ ಕಾಡಂಚಿನ ಮಹಿಳೆಯರು, ತೋಟದ ಕೂಲಿ ಕಾರ್ಮಿಕ ಮಹಿಳೆಯರು ಯೋಜನೆ ಪಡೆಯಲು ಬರುತ್ತಿಲ್ಲ ಎಂದು ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.ಸೆಪ್ಟೆಂಬರ್ ತಿಂಗಳ ಹಣದಲ್ಲಿ ಕೆಲವರಿಗೆ ಹಣ ಜಮಾವಣೆ ಆಗುತ್ತಿಲ್ಲ. ಕೆಲವೊಂದು ತಾಂತ್ರಿಕ ದೋಷ, ಸರ್ವರ್‌ ಸಮಸ್ಯೆ ಮೊದಲಾದ ಕಾರಣದಿಂದ ಯೋಜನೆಯ ಹಣ ಜನೆ ಮಾಡುವುದರಲ್ಲಿ ಸಮಸ್ಯೆಯಾಗಿದೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


