ಕಾರವಾರ: ವಿದ್ಯುತ್ ಶಾಕ್ ಹೊಡೆದು ಹೆಣ್ಣಾನೆ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಬೆಡಸಗಾಂವ ಬಳಿಯ ಕಾಳೇಬೈಲ್ ನಲ್ಲಿ ನಡೆದಿದೆ.ಸುಮಾರು ಹತ್ತು ವರ್ಷದ ಹೆಣ್ಣಾನೆ ಕಾಳೇಬೈಲ್ ಬಳಿ ಆಹಾರ ಸೇವಿಸುತ್ತಿತ್ತು. ಹೈಟೆನ್ಶನ್ ವಿದ್ಯುತ್ ತಂತಿ ಹಸಿ ಗಿಡಕ್ಕೆ ತಾಗಿದ್ದು, ಆಹಾರ ತಿನ್ನುತ್ತಿದ್ದ ಆನೆ ಅದನ್ನು ಮುಟ್ಟಿದೆ. ಇದರಿಂದ ತಕ್ಷಣ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ಆನೆ ಮೃತಪಟ್ಟಿದೆ.ವಿಚಾರ ತಿಳಿದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆ ಅಂದರೆ ಶುಕ್ರವಾರ ಇದೇ ಭಾಗದಲ್ಲಿ ಗರ್ಭಿಣಿ ಆನೆಯೊಂದು ಸಾವು ಕಂಡಿತ್ತು. ಒಂದು ವಾರದೊಳಗೆ ಎರಡು ಆನೆಗಳು ಸಾವನ್ನಪ್ಪಿದ್ದು, ನೋವಿನ ಸಂಗತಿಯಾಗಿದೆ.Sign in to your account
Username or Email Address


Password

 Remember Me


