ಬೆಂಗಳೂರು: ದರ್ಶನ್ ಅವರ 50ನೇ ಚಿತ್ರ ಯಜಮಾನ ಆರಂಭವಾಗಿದೆ. ಬಿ.ಸುರೇಶ ಮತ್ತು ಶೈಲಜಾ ನಾಗ್ ಅವರ ಮೀಡಿಯಾ ಹೌಸ್ ನಿರ್ಮಾಣ. ಪೊನ್ನುಕುಮಾರ್ ನಿರ್ದೇಶಕ. ಮೈಸೂರಲ್ಲಿ ಶೂಟಿಂಗ್ ನಡೀತಿದೆ. ಇಷ್ಟು ವಿಚಾರಗಳನ್ನು ಬಿಟ್ಟು ಬೇರೇನೋ ಸುದ್ದಿ ಹೊರಗೆ ಬರುತ್ತಲೇ ಇಲ್ಲ. ಚಿತ್ರತಂಡದ ಕಣ್ತಪ್ಪಿಸಿ ಸಣ್ಣ ಫೋಟೋ ಕೂಡಾ ಹೊರಬರಲು ಸಾಧ್ಯವಾಗುತ್ತಿಲ್ಲ.ಆದರೂ ನಾವಿಲ್ಲಿ ಒಂದು ಫೋಟೋ ಪ್ರಕಟಿಸಿದ್ದೇವೆ. ಇದು ಹಳ್ಳಿ ಮಾರುಕಟ್ಟೆ ಬೀದಿಯನ್ನು ಮರುಸೃಷ್ಟಿಸಿರುವಂಥಾ ಸೆಟ್. ಹತ್ತನೇ ತಾರೀಕಿನ ಹೊತ್ತಿಗೆ ಈ ಸೆಟ್ಟನ್ನು ತೆರವುಗೊಳಿಸಿ ಮತ್ತೊಂದು ಸೆಟ್ ಕೂರಿಸುತ್ತಾರಂತೆ. ಮೇಲ್ನೋಟಕ್ಕೆ ಈ ಸಂತೆ ಬೀದಿಯ ಚಿತ್ರಣವನ್ನು ನೋಡಿದರೆ ಈ ಕಾಲಕ್ಕೆ ಹೊಂದುವಂತೆ ಕಾಣುತ್ತಿಲ್ಲ. ಬದಲಾಗಿ ಒಂದೆರಡು ತಲೆಮಾರಿನ ಹಿಂದಿನ ಚಿತ್ರಣವನ್ನು ನೀಡುತ್ತಿದೆ. ಅದು ಹೌದಾದರೆ, ಯಜಮಾನ ಸಿನಿಮಾ ಎರಡು ಜನರೇಷನ್ನಿನ ಕತೆ ಆಗಿರಲೂ ಬಹುದು ಎಂಬ ಅನುಮಾನ ಮೂಡುತ್ತಿದೆ. ಇದನ್ನೂ ಓದಿ: ಸಿನಿಮಾ ಸೆಟ್ ನ ಮೊದಲ ದಿನವೇ ಯಜಮಾನನಾಗಿ ಬಂದ ಚಾಲೆಂಜಿಂಗ್ ಸ್ಟಾರ್!ಖ್ಯಾತ ಕಲಾ ನಿರ್ದೇಶಕ ಶಶಿಧರ ಅಡಪ ಅವರ ತಂಡ ಈ ಸೆಟ್ ಅನ್ನು ರೂಪಿಸಿದೆ. ಅಂದಹಾಗೆ ಈ ಸೆಟ್ ಅನ್ನು ನೋಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹೋದರ ದಿನಕರ್, ನಿರ್ದೇಶಕ ಎಂ.ಡಿ. ಶ್ರೀಧರ್ ಸೇರಿದಂತೆ ದರ್ಶನ್ ಅವರ ಆಪ್ತರು, ಸಿನಿಮಾ ತಂತ್ರಜ್ಞರು ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ.Sign in to your account
Username or Email Address


Password

 Remember Me


