ಬೆಂಗಳೂರು: ಬಕಾಸುರ ಸಿನಿಮಾದ ಟ್ರೇಲರ್ ರಿಲೀಸಾಗಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಬಕಾಸುರ ಸಿನಿಮಾದ ಟ್ರೇಲರನ್ನು ಬಿಡುಗಡೆಗೊಳಿಸಿದ್ದಾರೆ. ಇದೇ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ದನಿ ನೀಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ಒಬ್ಬ ಹೀರೋ ಕಂಡರೆ ಮತ್ತೊಬ್ಬರಿಗೆ ಆಗೋದಿಲ್ಲ ಎನ್ನುವಂತಾ ವಾತಾವರಣ ನಿರ್ಮಾಣವಾಗಿದೆ. ಹೀಗಿರುವಾಗ ಟ್ರೇಲರ್ ಲಾಂಚ್ ಮಾಡಿದ ಮುರಳಿ ಹೇಳಿದ್ದಿಷ್ಟು.. ‘ಈ ಚಿತ್ರದಲ್ಲಿ ನಟಿಸಿರುವ ರೋಹಿತ್ ನನ್ನ ಫ್ರೆಂಡ್, ನಿರ್ದೇಶಕ ನವನೀತ್ ನನ್ನ ಫ್ರೆಂಡು, ಟ್ರೇಲರ್ ಗೆ ವಾಯ್ಸ್ ಕೊಟ್ಟಿರುವ ಯಶ್ ಕೂಡಾ ನನ್ನ ಆತ್ಮೀಯ ಮಿತ್ರ. ಇಲ್ಲಿ ಒಬ್ಬರನ್ನೊಬ್ಬರು ಕೈ ಹಿಡೀಬೇಕು. ಒಬ್ಬರ ಸಿನಿಮಾಗೆ ಒಬ್ಬರು ಸಹಕಾರಿಯಾಗಿ ನಿಲ್ಲಬೇಕು. ಅದರಲ್ಲೇನಿದೆ. ಜೊತೆಜೊತೆಯಾಗಿ ಬೆಳೆಯೋದರ ಮಜಾನೇ ಬೇರೆ’. ಇದು ಶ್ರೀಮುರಳಿ ಮಾತು.ಅಂದಹಾಗೆ ಇದೇ ಬಕಾಸುರ ಚಿತ್ರದ ನಿರ್ಮಾಪಕರಾದ ಕೃಷ್ಣ ಚೈತನ್ಯ ಅವರೇ ನಿರ್ಮಿಸಿ, ನವನೀತ್ ಅವರೇ ನಿರ್ದೇಶಿಸಿದ್ದ ಕರ್ವ ಸಿನಿಮಾದ ಟ್ರೇಲರನ್ನೂ ಶ್ರೀಮುರಳಿ ಅವರೇ ರಿಲೀಸ್ ಮಾಡಿದ್ದರಂತೆ. ಈಗ ಬಕಾಸುರ ಸಿನಿಮಾದ ಟ್ರೇಲರನ್ನೂ ಮುರಳಿ ಅವರೇ ಲೋಕಾರ್ಪಣೆ ಮಾಡಿದ್ದಾರೆ. ಹೀಗಾಗಿ ಬಕಾಸುರ ಸಹಾ ಕರ್ವ ರೀತಿಯಲ್ಲೇ ಹಂಡ್ರೆಡ್ ಡೇಸ್ ಪೂರೈಸುತ್ತದೆ ಅನ್ನೋದು ಚಿತ್ರದ ನಾಯಕನಟ ರೋಹಿತ್ ನಂಬಿಕೆ.


 Advertisement 







 Advertisement 




Sign in to your account
Username or Email Address


Password

 Remember Me


