ಕೋಲಾರ: ಕಾರು ಹರಿದು ಒಂದು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕೋಲಾರ ನಗರದ ಗಲ್ ಪೇಟೆ ಬಡಾವಣೆಯಲ್ಲಿ ನಡೆದಿದೆ.ನಯೀಮ್ ಎಂಬವರ ಮಗ ಇಕ್ರಂ ಮೃತ ಬಾಲಕ. ಇಕ್ರಂ ನ ತಾಯಿ ನೀರು ಹಿಡಿಯುವಾಗ ಬಾಲಕ ಕೂಡ ತಾಯಿ ಜೊತೆ ಬಂದಿದ್ದ. ಅಕಸ್ಮಾತ್ತಾಗಿ ರಸ್ತೆಗೆ ಬಂದ ಪರಿಣಾಮ ಕಾರಿಗೆ ಸಿಲುಕಿ ಬಾಲಕ ಸಾವನ್ನಪ್ಪಿದ್ದಾನೆ.ಘಟನೆಯಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗಲ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.Sign in to your account
Username or Email Address


Password

 Remember Me


