ಚಾಮರಾಜನಗರ: ಇತ್ತೀಚಿನ ದಿನಗಳಲ್ಲಿ ಸೆಲ್ಫಿ ಮೂಲಕ ಸುದ್ದಿಯಾಗಿದ್ದ ಸಿದ್ದರಾಮಯ್ಯ ಈಗ ಸೆಲ್ಫಿ ಅಂದರೆ ದೊಡ್ಡ ಹಿಂಸೆ ಎಂದು ಹೇಳಿದ್ದಾರೆ.ಇಂದು ಚಾಮರಾಜನಗರದಲ್ಲಿ ದಿ. ಮಹದೇವಪ್ರಸಾದ್ ಸಮಾಧಿಗೆ ಪೂಜೆ ಮಾಡಲು ತೆರಳಿದ್ದರು. ಪೂಜೆ ಮಾಡಿ ವಾಪಸ್ ಬಂದು ಫೋಟೋ ತೆಗೆದುಕೊಳ್ಳುವಾಗ ಈ ರೀತಿ ಒಂದು ಹಾಸ್ಯ ಚಟಾಕಿಯನ್ನು ಸಿಡಿಸಿದ್ದಾರೆ.ಮದುವೆಗಳಿಗೆ ಹಾಗೂ ಕಾರ್ಯಕ್ರಮಗಳಿಗೆ ಹೋದರೆ ಹೆಂಗಸರು ಸೆಲ್ಫಿ ಸೆಲ್ಫಿ ಎಂದು ನನ್ನನ್ನು ಹಿಡಿದು ಕೊಳ್ಳುತ್ತಾರೆ. ಅಯ್ಯೋ ಅದು ದೊಡ್ಡ ಹಿಂಸೆ ಎಂದು ಸೆಲ್ಫಿ ಕ್ರೇಜ್ ಬಗ್ಗೆ ಮಾತನಾಡಿದ್ದಾರೆ.ಈ ಹಿಂದೆ ಶಿವಮೊಗ್ಗದಲ್ಲಿ ನಡೆದಿದ್ದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಹಲವು ವಿದ್ಯಾರ್ಥಿನಿಯರು ಮುಖ್ಯಮಂತ್ರಿಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು. ಸಿಎಂ ಜೊತೆ ವಿದ್ಯಾರ್ಥಿನಿ ಸೆಲ್ಫಿ ಕ್ಲಿಕ್ಕಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಈ ಹಿಂದೆ ಸಿಎಂ ಮಂಗಳೂರಿನಲ್ಲಿ ಮೇಯರ್ ಕವಿತಾ ಸನೀಲ್ ಅವರ ಹೊಟ್ಟೆಗೆ ಪಂಚ್ ಕೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 2016ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತರೀಕೆರೆ ತಾಲೂಕು ಪಂಚಾಯ್ತಿ ಸದಸ್ಯೆಯಾಗಿರುವ ಗಿರಿಜಾ ಶ್ರೀನಿವಾಸ್ ಎಂಬವರು ಸಿಎಂಗೆ ಮುತ್ತು ಕೊಟ್ಟಿದ್ದರು.Sign in to your account
Username or Email Address


Password

 Remember Me


