ಬೆಂಗಳೂರು: ಐವರು ಮುಸುಕುಧಾರಿಗಳು ಆಭರಣದ ಅಂಗಡಿಯಲ್ಲಿ ದರೋಡೆ ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ನಡೆದಿದೆ.ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬೆದರಿಸಿ ಸುಮಾರು 500 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ್ದಾರೆ. ಮಾಚೋಹಳ್ಳಿಯ ಅಮ್ಮ ಜ್ಯುವೆಲರಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯರು ಅಂಗಡಿ ಬಳಿ ಬಂದಾಗ ದರೋಡೆಕೋರರು ಎಸ್ಕೇಪ್ ಆಗಿದ್ದಾರೆ.ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಓರ್ವ ದರೋಡೆಕೋರನನ್ನು ಸೆರೆ ಹಿಡಿದಿದ್ದಾರೆ. ದರೋಡೆಕೋರರನ್ನ ಹಿಡಿಯುವ ವೇಳೆ ಓರ್ವ ಸ್ಥಳೀಯ ವ್ಯಕ್ತಿಗೆ ಗಾಯವಾಗಿದೆ.Sign in to your account
Username or Email Address


Password

 Remember Me


