ಹುಬ್ಬಳ್ಳಿ: ರೈತರ ಆತ್ಮಹತ್ಯೆ ತಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿ ಡೆತ್ ನೋಟ್ ಬರೆದಿಟ್ಟು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರು ಗ್ರಾಮದಲ್ಲಿ ನಡೆದಿದೆ.ಕಿರೆಸೂರು ಗ್ರಾಮದ ವೀರಪ್ಪ ಸವದತ್ತಿ(38) ಆತ್ಮಹತ್ಯೆ ಮಾಡಿಕೊಂಡ ರೈತ. ನನ್ನ ಸಾವಿಗೆ ನನ್ನ ವಾಹನ ಸಾಲ ಕಾರಣ. ಸಾಲ ಮರುಪಾವತಿ ಮಾಡುವುದು ಬಹಳ ಕಷ್ಟವಾಗಿದ್ದು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಹೆಂಡತಿ ಹಾಗೂ ಮಕ್ಕಳನ್ನು ಬಿಟ್ಟು ಹೋಗಲು ಬಹಳ ನೋವಾಗುತ್ತದೆ. ನಾನು ಸತ್ತ ಮೇಲೆ ನನ್ನ ಪತ್ನಿಯ ತಾಳಿ, ಕುಂಕುಮ ತೆಗೆಯಬೇಡಿ ಎಂದು ವೀರಪ್ಪ ಮನವಿ ಮಾಡಿದ್ದಾರೆ. ಅದರ ಜೊತೆಗೆ ಪತ್ನಿಯನ್ನ ಹೊಲಕ್ಕೆ ಕಳಿಸಬೇಡಿ. ಆಸ್ತಿಯನ್ನ ಹೆಂಡತಿ ಹೆಸರಿಗೆ ಮಾಡಿ. ಅವಳಿಗೆ ವಿಧವೆಯರ ರೀತಿಯಲ್ಲಿ ಮಾಡಬೇಡಿ ಎಂದು ಮನವಿ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರೈತರ ಆತ್ಮಹತ್ಯೆ ತಪ್ಪಿಸಲು ಉತ್ತಮ ಸರ್ಕಾರ ಅಧಿಕಾರಕ್ಕೆ ಬರಬೇಕು. ರೈತರ ಆತ್ಮಹತ್ಯೆ ತಡೆಯಿರಿ ಎಂದು ಕೂಡ ಪತ್ರದಲ್ಲಿ ಮನವಿ ಮಾಡಿದ್ದಾರೆ. ಈ ಕುರಿತಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


