ತುಮಕೂರು: ನಗರದಲ್ಲಿ ಮತ್ತೆ ಬೈಕ್ ವೀಲಿಂಗ್ ಹಾವಳಿ ಶುರುವಾಗಿದ್ದು, ವೀಲಿಂಗ್ ಮಾಡಬೇಕಾದರೆ ವ್ಯಕ್ತಿಗೆ ಬೈಕ್ ಟಚ್ ಆದ ಪರಿಣಾಮ ಸ್ಥಳೀಯರು ಬೈಕಿಗೆ ಬೆಂಕಿ ಹಚ್ಚಿದ ಘಟನೆ ತುಮಕೂರು ನಗರದ ಟೌನ್ ಹಾಲ್ ಸರ್ಕಲ್ ಬಳಿ ನಡೆದಿದೆ.ಫಾರೂಕ್(23), ಶಮೀರ್(19) ಹಾಗೂ ಸಲ್ಮಾನ್(20) ಬೈಕ್ ವೀಲಿಂಗ್ ಮಾಡಿದ ಯುವಕರು. ಮೂವರು ಮರಳೂರು ದಿಣ್ಣೆ ಸಮೀಪದ ನಜಬಾದ್ ನಿವಾಸಿಗಳಾಗಿದ್ದು, ಭಾನುವಾರ ರಾತ್ರಿ ವೀಲಿಂಗ್ ಮಾಡಬೇಕಾದರೆ ವ್ಯಕ್ತಿಗೆ ಬೈಕ್ ಟಚ್ ಆಗಿದೆ.ಮೂವರು ಯುವಕರು ಸೇರಿ ಎರಡು ಬೈಕಿನಲ್ಲಿ ವೀಲಿಂಗ್ ಮಾಡಿಕೊಂಡು ಬಂದಿದ್ದಾರೆ. ಕಂಟ್ರೋಲ್ ಸಿಗದೆ ದಾರಿಹೋಕನಿಗೆ ಬೈಕ್ ಟಚ್ ಮಾಡಿದ್ದಾರೆ. ಟಚ್ ಮಾಡಿದ ಪರಿಣಾಮ ಸ್ಥಳೀಯರು ಬೈಕ್ ಸವಾರರಿಗೆ ಥಳಿಸಿ ಬೈಕಿಗೆ ಬೆಂಕಿ ಹಚ್ಚಿದ್ದಾರೆ.ಸದ್ಯ ಮೂವರು ಯುವಕರನ್ನು ಸ್ಥಳೀಯರು ಟೌನ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದು, ನಗರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. Sign in to your account
Username or Email Address


Password

 Remember Me


