ಚಾಮರಾಜನಗರ: ಸರ್ಕಾರಿ ಕೆಲಸ ಸಿಗದ ಹಿನ್ನೆಲೆಯಲ್ಲಿ ಖಿನ್ನತೆಗೊಳಗಾಗಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಚಾಮಲಪುರದಲ್ಲಿ ಜರುಗಿದೆ.ಚಾಮಲಪುರದ ಮಧು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ. ಸರ್ಕಾರಿ ಕೆಲಸ ಕೊಡಿಸುವುದಾಗಿ ಮಧುನಿಂದ ಚಾಮಣ್ ಮತ್ತು ಶಶಿಧರ್ ಎಂಬವರು ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು. ಹಣ ನೀಡಿ ವರ್ಷಗಳು ಕಳೆದ್ರೂ ಯುವಕನಿಗೆ ಸರ್ಕಾರಿ ಕೆಲಸ ಕೊಡಿಸುವ ಸೂಚನೆಗಳು ದೊರಕಲಿಲ್ಲ.ಹೀಗಾಗಿ ಮಧು ಚಾಮಣ್ ಮತ್ತು ಶಶಿಧರ್ ಅವರನ್ನು ವಿಚಾರಿಸಿದ್ದಾನೆ. ಆದ್ರೆ ಮಧುಗೆ ಅವರಿಂದ ಸರಿಯಾದ ಉತ್ತರಗಳು ಬಂದಿಲ್ಲ. ಹೀಗಾಗಿ ಮಧು ಖಿನ್ನತೆಗೆ ಒಳಗಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.ಈ ಸಂಬಂಧ ಯಳಂದೂರು ಪೊಲೀಸ್ ಠಾಣೆಯಲ್ಲಿ ಚಾಮಣ್ ಮತ್ತು ಶಶಿಧರ್ ವಿರುದ್ಧ ದೂರು ದಾಖಲಾಗಿದೆ.Sign in to your account
Username or Email Address


Password

 Remember Me


