ಬೆಂಗಳೂರು: ಈಶಾನ್ಯ ರಾಜ್ಯಗಳಾಯ್ತು, ಇನ್ನು ಕರ್ನಾಟಕದಲ್ಲಿ ಕಮಲ ಅರಳಿಸಲು ಬಿಜೆಪಿ ಚಾಣಕ್ಯ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಮುಂದಿನ ಟಾರ್ಗೆಟ್ ಕರ್ನಾಟಕ: ಮೋದಿ, ಶಾ ಕರ್ನಾಟಕದ ಬಗ್ಗೆ ಹೇಳಿದ್ದು ಏನು?ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಏಪ್ರಿಲ್‍ನಲ್ಲಿ ರಾಜ್ಯದಲ್ಲಿಯೇ ವಾಸ್ತವ್ಯ ಹೂಡಲಿರುವರು. ಇದಕ್ಕಾಗಿ ಬಾಡಿಗೆ ಪಡೆದಿದ್ದ ಬೆಂಗಳೂರಿನ ಅಲ್ಲಾಳಸಂದ್ರ ಮನೆಯಲ್ಲಿ ಸರ್ಪ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮನೆಯನ್ನೇ ಶಿಫ್ಟ್ ಮಾಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಹುತಾತ್ಮ ಪಿಎಸ್‍ಐ ಮಲ್ಲಿಕಾರ್ಜುನ್ ಬಂಡೆ ಮಕ್ಕಳನ್ನ ದತ್ತು ಪಡೆದ ಅಮಿತ್ ಶಾಇದೀಗ ಜನಾರ್ದನ ರೆಡ್ಡಿ ನಿವಾಸ ಪಾರಿಜಾತದ ಪಕ್ಕದಲ್ಲೇ ಶಾ ಅವರಿಗೆ ಮತ್ತೊಂದು ಐಷಾರಾಮಿ ಮನೆ ರೆಡಿಯಾಗಿದೆ. ಫೈರ್ ಫೀಲ್ಡ್ ಲೇಔಟ್‍ನಲ್ಲಿರುವ ಮೂರು ಅಂತಸ್ತಿನ 1.5ಲಕ್ಷ ರೂಪಾಯಿಯ ಮನೆ ಬಾಡಿಗೆಗೆ ಪಡೆದಿದ್ದಾರೆ. ಈ ಮನೆ 8 ಬೆಡ್ ರೂಮ್, ಮೂರು ಬಾತ್ ರೂಮ್ ಹೊಂದಿದೆ. ಅಲ್ಲದೇ 40-50 ಜನರು ಸಭೆ ನಡೆಸಲು ಬೇಕಾದ ವಿಶಾಲವಾದ ಹಾಲ್ ಕೂಡ ಇದೆ. ಈ ಮನೆ ಗುಜರಾಜ್‍ನ ಪ್ರೀತಿ ನಲ್ಪಾಣಿ ಎಂಬವರಿಗೆ ಸೇರಿದ್ದಾಗಿದೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಮಿತ್ ಶಾ ವಾಸ್ತವ್ಯ- ಕೆಲವೇ ಹೊತ್ತಲ್ಲಿ ವಿಶೇಷ ಪೂಜೆಕುಕ್ಕೆಯಲ್ಲಿ ಅಮಿತ್ ಷಾ ಪೂಜೆ ಸಲ್ಲಿಸಿದ ದಿನವೇ ಈ ಮನೆಯಲ್ಲೂ ಪೂಜೆ ನಡೆದಿದೆ. ಒಟ್ಟಿನಲ್ಲಿ ಸರ್ಪ ದೋಷ ಪರಿಹಾರ ಮಾಡಿಸಿಕೊಂಡ ಅಮಿತ್ ಶಾ ಅವರಿಗೆ ಈ ನಿವಾಸ ಅದೃಷ್ಟವಾಗುತ್ತಾ ಎಂಬುದನ್ನು ಕಾದುನೋಡಬೇಕು. ಇದನ್ನೂ ಓದಿ: ಕರಾವಳಿಯಲ್ಲಿ ನಾಲ್ಕು ದಿನ ಅಮಿತ್ ಶಾ ಟೂರ್- ಬಿಜೆಪಿಯಲ್ಲಿ ಮಿಂಚಿನ ಸಂಚಲನSign in to your account
Username or Email Address


Password

 Remember Me


