ರಾಯಚೂರು: ಡೀಸೆಲ್ ಸಾಗಿಸುತ್ತಿದ್ದ ಎರಡು ಲಾರಿಗಳು ಒಂದಾದ ಮೇಲೆ ಒಂದು ಪಲ್ಟಿಯಾಗಿದ್ದು, ಡೀಸೆಲ್ ಸೋರಿಕೆಯಾಗಿರುವ ಘಟನೆ ಜಿಲ್ಲೆಯ ಸಿರವಾರ ಬಳಿ ನಡೆದಿದೆ.ಕಲಬುರ್ಗಿಯಿಂದ ಸಿರವಾರಕ್ಕೆ ಡೀಸೆಲ್ ತರುತ್ತಿದ್ದ ಐದು ಲಾರಿಗಳಲ್ಲಿ ಎರಡು ಲಾರಿಗಳು ಚಾಲಕರ ನಿಯಂತ್ರಣ ತಪ್ಪಿ ನೂರು ಮೀಟರ್ ಅಂತರದಲ್ಲಿ ರಸ್ತೆ ಪಕ್ಕ ಉರುಳಿ ಬಿದ್ದಿವೆ. ಈ ಅಪಘಾತದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಎರಡು ಲಾರಿಗಳು ಪಲ್ಟಿಯಾದ ಪರಿಣಾಮ ಎರಡನೇ ಟ್ಯಾಂಕರ್ ನಲ್ಲಿದ್ದ ಡಿಸೇಲ್ ಸೋರಿಕೆಯಾಗಿದೆ.ಎರಡನೇ ಟ್ಯಾಂಕರ್ ಡಿಸೇಲ್ ಸೋರಿಕೆಯಾಗುವುದನ್ನ ತಿಳಿದ ಜನರು ಮುಗಿಬಿದ್ದು, ಕ್ಯಾನ್ ಗಳಲ್ಲಿ ಡೀಸೆಲ್ ತುಂಬಿಕೊಂಡು ಹೋಗಿದ್ದಾರೆ. ಲಾರಿ ಒಳಗೆ ಸಿಲುಕಿದ್ದ ಚಾಲಕನನ್ನ ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದಾರೆ.ಈ ಸಂಬಂಧ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


