ಕಲಬುರಗಿ: ಎರಡೂವರೆ ತಿಂಗಳು ಹೆಣ್ಣು ಮಗು ಸಮೇತ ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ಗ್ರಾಮದಲ್ಲಿ ನಡೆದಿದೆ.ಶರಣು ಕವಲಗಿ(35) ತನ್ನ ಎರಡುವರೆ ತಿಂಗಳ ಮಗು ರುತ್ವಿ ಯನ್ನು ಎದೆಗೆ ಅವುಚಿಕೊಂಡು ನಂತರ ಸಿಮೆ ಎಣ್ಣೆ ಸುರಿದುಕೊಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನು. ಮೂಲತ ಕಲಬುರಗಿ ತಾಲೂಕಿನ ಇಟಗಾ ಗ್ರಾಮದ ನಿವಾಸಿಯಾದ ಶರಣು, ತನ್ನ ಪತ್ನಿಯ ತವರು ಮನೆಯಾದ ಗಾಣಗಪೂರ ಗ್ರಾಮಕ್ಕೆ ಇಂದು ಮುಂಜಾನೆ ಹೋಗಿದ್ದನು.ಹೆರಿಗೆಯಾದ ನಂತರ ತವರು ಮನೆಯಲ್ಲಿದ್ದ ಪತ್ನಿ ಜೊತೆ ಆಗಾಗ ಜಗಳವಾಡಿದ್ದನು. ಇಂದು ಕೂಡಾ ಪತ್ನಿ ಜೊತೆ ಜಗಳವಾಡಿದ್ದರಿಂದ ಪತ್ನಿ ಪೊಲೀಸ್ ಠಾಣೆಗೆ ಹೋಗುವುದಾಗಿ ಹೇಳಿದ್ದಾರೆ. ಅಷ್ಟರಲ್ಲೇ ಜೋಳಿಗೆಯಲ್ಲಿದ್ದ ಮಗುವನ್ನು ತಗೆದುಕೊಂಡು ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಮಗು ಸಮೇತ ಬೆಂಕಿ ಹಚ್ಚಿಕೊಂಡಿದ್ದಾನೆ. ಕೋಣೆಯ ಬಾಗಿಲು ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದರಿಂದ ಬಾಗಿಲು ಮುರಿದು ಒಳ ಹೋಗುವಷ್ಟರಲ್ಲಿ ಬೆಂಕಿಯಿಂದ ತಂದೆ ಮಗಳು ಸುಟ್ಟು ಕರಕಲಾಗಿದ್ದರು.ಶರಣು ಕುಡಿದ ಮತ್ತಿನಲ್ಲಿ ಪತ್ನಿ ಜೊತೆ ಜಗಳವಾಡಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಪತ್ನಿ ಜೊತೆ ಆಗಾಗ ಜಗಳವಾಡಿಕೊಳ್ಳುತ್ತಿದ್ದನು. ಅಷ್ಟೇ ಅಲ್ಲದೇ ಪತ್ನಿಗೆ ಕಿರುಕುಳ ಕೊಡುತ್ತಿದ್ದನು ಎಂದು ತಿಳಿದು ಬಂದಿದೆ. ಈ ಘಟನೆ ಸಂಬಂಧ ಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


