ಮೈಸೂರು: ಆನೆ ದಾಳಿಗೆ ನಾಗರಹೊಳೆ ಹುಲಿ ಸಂರಕ್ಷಣಾ ಯೋಜನೆಯ ನಿರ್ದೇಶಕ ಮಣಿಕಂಠನ್ (45) ಮೃತಪಟ್ಟಿದ್ದಾರೆ.  ಹೆಚ್.ಡಿ.ಕೋಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ನಾಗರಹೊಳೆ ಅರಣ್ಯ ಪ್ರದೇಶದ ಡಿ.ಬಿ.ಕುಪ್ಪೆ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.ಇಂದು ಫೈರ್ ಲೈನ್  ಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಸರ್ವೆ ನಡೆಸುತ್ತಿದ್ದರು. ಸ್ವತಃ ಸರ್ವೆ ನಡೆಸಲು ಸಿಎಫ್ ಮಣಿಕಂಠನ್ ಕಾಡಿನೊಳಗೆ ನುಗ್ಗಿದ್ದರು. ಈ ವೇಳೆ ಏಕಾಏಕಿ ಆನೆಯೊಂದು ಬಂದು ದಾಳಿ ನಡೆಸಿದೆ. ತಕ್ಷಣವೇ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮಣಿಕಂಠನ್ ಸಾವನ್ನಪ್ಪಿದ್ದಾರೆ.ತಮಿಳುನಾಡು ಮೂಲದ 2001 ಎಎಫ್‍ಎಸ್ ಬ್ಯಾಚ್ ಅಧಿಕಾರಿಯಾಗಿದ್ದ ಮಣಿಕಂಠನ್ ಈ ಹಿಂದೆ ಹಲವು ಜಿಲ್ಲೆಗಳಲ್ಲಿ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಎರಡು ವರ್ಷಗಳಿಂದ ನಾಗರಹೊಳೆ ಹುಲಿ ಸಂರಕ್ಷಣಾ ಯೋಜನೆ ನಿರ್ದೇಶಕರಾಗಿದ್ದರು.ಮಣಿಕಂಠನ್ ಕುಟುಂಬಸ್ಥರು ಬೆಂಗಳೂರಿನಲ್ಲಿ ನೆಲೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಪಾರ್ಥಿವ ಶರೀರ ತರಲಾಗಿದೆ.






 Advertisement 




Sign in to your account
Username or Email Address


Password

 Remember Me


