ತುಮಕೂರು: ತನ್ನ ಮರಿಯೊಂದು ಅಪಘಾತದಲ್ಲಿ ಸಾವನ್ನಪ್ಪಿದ್ದನ್ನು ಕಂಡ ತಾಯಿ ನಾಯಿ ವೇದನೆ ಪಟ್ಟ ಮನಕಲಕುವ ಘಟನೆ ತುಮಕೂರಿನಲ್ಲಿ ನಡೆದಿದೆ.ನಗರದ ಹನುಮಂತಪುರದಲ್ಲಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ನಾಯಿ ಮರಿಯೊಂದು ಸಾವನಪ್ಪಿತ್ತು. ಇದನ್ನು ಕಂಡ ತಾಯಿ ನಾಯಿ ತನ್ನ ಮರಿಯ ಮೈ ಸವರಿ ಒಂದೇ ಸಮನೆ ರೋಧಿಸಿದೆ. ನಡುರಸ್ತೆಯಲ್ಲಿ ಬಿದ್ದ ಮೃತದೇಹವನ್ನು ಬೇರೆಡೆ ಸಾಗಿಸಿ ತಾಯಿ ನಾಯಿ ಪ್ರಯತ್ನಿಸುತ್ತಿತ್ತು. ಹಾಗಾಗಿ ತನ್ನ ಇತರ ಬಳಗವನ್ನು ಕರೆದಿದ್ದು, ಸಾಧ್ಯವಾಗಲಿಲ್ಲ.ನಾಯಿಯ ಕಷ್ಟ ಕಂಡ ಪೀಟರ್ ಎಂಬವರು ನಾಯಿಮರಿಯ ಮೃತದೇಹವನ್ನು ಬೇರೆಡೆ ಸಾಗಿಸಿದ್ದಾರೆ. ಆಗ ತಾಯಿ ನಾಯಿ ಮೃತದೇಹದ ಹಿಂದೆ ಓಡಿಹೋಗುತ್ತಿದ್ದುದು ಕಂಡರೆ ಹೆತ್ತಕರುಳಿನ ನೋವಿನ ಅರಿವಾಗುತ್ತಿತ್ತು.Sign in to your account
Username or Email Address


Password

 Remember Me


