ಬೆಂಗಳೂರು: ಮುಖ್ಯಮಂತ್ರಿ ಸ್ಥಾನದ ಮೇಲೆ ಸಿದ್ದರಾಮಯ್ಯ ಕಣ್ಣಿಟ್ಟಿದ್ದು, ಎಲೆಕ್ಷನ್‍ಗೂ ಮುನ್ನವೇ ಸಂದೇಶ ರವಾನಿಸಿದ್ದಾರೆ.ಉಪ್ಪಾರ ಸಮಾವೇಶದಲ್ಲಿ ಸಿಎಂ ಹುದ್ದೆ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯ ಈ ಸಂದೇಶ ರವಾನಿಸಿದ್ದು, ಐದು ವರ್ಷ ನಿಮ್ಮ ಆಶೀರ್ವಾದದಿಂದ ಸಿಎಂ ಆಗಿದ್ದೆ. ಮತ್ತೆ ನಾನೇ ಮುಖ್ಯಮಂತ್ರಿ ಆಗಬೇಕು ಅಂದ್ರೆ ಕಾಂಗ್ರೆಸ್‍ಗೆ ಮತ ಹಾಕಬೇಕು ಎಂದು ಹೇಳಿದ್ದಾರೆ. ಬೆಳ್ಳಿ ಗದೆ ಹೆಗಲ ಮೇಲೆ ಹೊತ್ತು ನಾನೂ ಸಿಎಂ ರೇಸಿನಲ್ಲಿದ್ದೇನೆ ಅಂತ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ.ಇಂದು ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ್ಪಾರ ಸಮುದಾಯದ ನಿಗಮ ಮಂಡಳಿಗೆ ಚಾಲನೆ ನೀಡಲಾಯ್ತು. ಸಚಿವ ಆಂಜನೇಯ ಸೇರಿದಂತೆ ನೂರಾರು ಜನ ಉಪ್ಪಾರ ಸಮುದಾಯದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಈ ವೇಳೆ ಸಮುದಾಯದ ಕಡೆಯಿಂದ ಸಿಎಂಗೆ ಬೆಳ್ಳಿ ಗದೆ ನೀಡಲಾಯ್ತು. ಗದೆಯನ್ನ ಪಡೆದ ಸಿಎಂ ನಾಟಕ ಪಾತ್ರದ ರೀತಿ ಎರಡು ಬಾರಿ ಗದೆಯನ್ನ ಎತ್ತಿ ಭುಜದ ಮೇಲೆ ಇಟ್ಟುಕೊಂಡ್ರು.ಸಿಎಂ ಸ್ಟೈಲ್ ಗೆ ಸಭೆಯಲ್ಲೆ ಜೈಕಾರ ಕೇಳಿಬಂತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಐದು ವರ್ಷ ನಿಮ್ಮ ಆಶೀರ್ವಾದದಿಂದ ಸಿಎಂ ಆಗಿದ್ದೆ. ಮತ್ತೆ ನನಗೆ ಆಶೀರ್ವಾದ ಮಾಡಿ ಅಂದ್ರು. ಸಮುದಾಯದ ಶಾಸಕ ಪುಟ್ಟ ರಂಗಶೆಟ್ಟಿ ಅವರನ್ನ ಶಾಸಕ ಮಾಡಿದ್ದು ನಾನು. ಮತ್ತೆ ಅಧಿಕಾರಕ್ಕೆ ಬಂದ್ರೆ ಮಂತ್ರಿ ಮಾಡುತ್ತೇನೆ. ಮತ್ತೆ ನಮಗೆ ಆಶೀರ್ವಾದ ಮಾಡಿ ಅಂತ ಕಾರ್ಯಕ್ರಮದಲ್ಲಿ ಮನವಿ ಮಾಡಿದ್ರು.Sign in to your account
Username or Email Address


Password

 Remember Me


