ದಾವಣಗೆರೆ: ದೇವರ ಮನೆಯಲ್ಲಿ ನಾಗರಹಾವೊಂದು ಹೆಡೆ ಎತ್ತಿ ಕುಳಿತಿದ್ದ ಘಟನೆ ಜಿಲ್ಲೆಯ ಕುಂದುವಾಡ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಚಂದ್ರಪ್ಪ ಎಂಬವರ ಮನೆಯಲ್ಲಿ ಇಂದು ಬೆಳಗ್ಗೆ ನಾಗರಹಾವು ಕಾಣಿಸಿಕೊಂಡಿತ್ತು. ಬೆಳಗ್ಗೆಯಿಂದ ದೇವರ ಮನೆಯನ್ನು ಬಿಟ್ಟು ಬಾರದೆ ದೇವರ ಫೋಟೋ ಮುಂದೆ ಇರುವ ಪುಸ್ತಕಗಳ ಮೇಲೆ ಹೆಡೆ ಎತ್ತಿ ಕುಳಿತಿತ್ತು.ಕಳೆದ ಆರು ತಿಂಗಳುಗಳಿಂದ ಈ ನಾಗರಹಾವು ಗ್ರಾಮದ ಹಲವು ಮನೆಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇಂದು ಬೆಳಗ್ಗೆ ಚಂದ್ರಪ್ಪ ಅವರ ಮನೆಯಲ್ಲಿ ಕಾಣಿಸಿಕೊಂಡಿತ್ತು. ಆದರೆ ಬೆಳಿಗ್ಗೆಯಿಂದ ಒಂದೇ ಮನೆಯಲ್ಲಿ ಇರುವುದಕ್ಕೆ ಗ್ರಾಮಸ್ಥರು ಭಯಭೀತರಾಗಿದ್ದರು. ಆದ್ದರಿಂದ ಈ ಹಾವನ್ನು ಹಿಡಿಯಲು ಗ್ರಾಮಸ್ಥರು ಉರಗ ತಜ್ಞರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಉರಗ ತಜ್ಞರು ಬಂದು ಹಾವನ್ನ ರಕ್ಷಣೆ ಮಾಡಿದ್ದಾರೆ. ಇದನ್ನು ಓದಿ: ಒಂದೇ ಜಾಗದಲ್ಲಿ ಎರಡು ಹಾವು, 300ಕ್ಕೂ ಹೆಚ್ಚು ಮೊಟ್ಟೆ – ಅಚ್ಚರಿಗೊಳಗಾದ ಸ್ಥಳೀಯರು!Sign in to your account
Username or Email Address


Password

 Remember Me


