ಮೈಸೂರು: ಒಂದು ನಿಮಿಷದಲ್ಲಿ 20 ಉರಿಯುವ ಕ್ಯಾಂಡಲ್ ಬಾಯಲ್ಲಿ ಇಟ್ಟುಕೊಂಡು ಲಿಮ್ಕಾ ಹಾಗೂ ಗಿನ್ನಿಸ್ ದಾಖಲೆಗೆ ಸೇರುವ ಯತ್ನ ನಗರದಲ್ಲಿ ನಡೆದಿದೆ.ಜಿಲ್ಲೆಯ ವಿದ್ಯಾರಣ್ಯಪುರಂ ನಿವಾಸಿ ಶಿವಕುಮಾರ್ ಅವರು ಲಿಮ್ಕಾ ಮತ್ತು ಗಿನ್ನಿಸ್ ದಾಖಲೆ ಸೇರುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಗೋರೆಗಾಂವ್ ನ ದಿನೇಶ್ ಶಿವನಾಥ್ ಉಪಾಧ್ಯಾಯರವರ ದಾಖಲೆ ಮುರಿಯಲು ಮುಂದಾಗಿದ್ದಾರೆ.ಮೈಸೂರಿನ ಪತ್ರಕರ್ತರ ಭವನದಲ್ಲಿ ಶಿವಕುಮಾರ್ ಈ ಸಾಹಸವನ್ನು ಪ್ರದರ್ಶಿಸಿದ್ದಾರೆ. 2008 ರಲ್ಲಿ ಅಂಗೈಯಲ್ಲಿ 24 ಕೋಳಿ ಮೊಟ್ಟೆಗಳನ್ನು ಇಟ್ಟುಕೊಂಡು ಲಿಮ್ಕಾ ದಾಖಲೆಗೆ ಸೇರಿದ್ದ ಶಿವಕುಮಾರ್, 2009 ರಲ್ಲಿ ಬಾಯಲ್ಲಿ 280 ಸ್ಟ್ರಾಗಳನ್ನು ಹಾಗೂ 2011 ರಲ್ಲಿ ಬಾಯಲ್ಲಿ 145 ಸಿಗರೇಟ್ ಗಳನ್ನು ಇಟ್ಟುಕೊಂಡು ಲಿಮ್ಕಾ ದಾಖಲೆ ಮಾಡಲು ಯತ್ನಿಸಿದ್ದರು.ಇದೀಗ 20 ಕ್ಯಾಂಡಲ್ ಗಳನ್ನು ಬಾಯಲ್ಲಿ ಇಟ್ಟುಕೊಂಡು ದಾಖಲೆ ಬರೆಯಲು ಮುಂದಾಗಿದ್ದಾರೆ. 15 ಕ್ಯಾಂಡಲ್ ಗಳನ್ನು 30 ಸೆಕೆಂಡ್ ಗಳ ಕಾಲ ಇಟ್ಟುಕೊಂಡು ಗಿನ್ನೆಸ್ ದಾಖಲೆ ನಿರ್ಮಿಸಿರುವ ಮುಂಬಯಿಯ ದಿನೇಶ್ ಶಿವನಾಥ್ ಉಪಾಧ್ಯಾಯ ಅವರ ದಾಖಲೆ ಮುರಿಯಲು ಶಿವಕುಮಾರ್ ಸಿದ್ಧರಾಗಿದ್ದಾರೆ.Sign in to your account
Username or Email Address


Password

 Remember Me


