ಬೆಂಗಳೂರು: ಓವರ್ ಟೇಕ್ ಮಾಡಲು ಜಾಗ ಬಿಡಲಿಲ್ಲ ಎಂದು ಯುವಕರ ತಂಡವೊಂದು ಊಬರ್ ಚಾಲಕನಿಗೆ ಥಳಿಸಿದ ಘಟನೆ ಗುರುವಾರ ರಾತ್ರಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ಬಳಿ ನಡೆದಿದೆ.ಪ್ರವೀಣ್(30) ಹಲ್ಲೆಗೊಳಗಾದ ಊಬರ್ ಚಾಲಕ. ಪ್ರವೀಣ್ ಸ್ವಿಫ್ಟ್ ಕಾರಿನಲ್ಲಿ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಇನ್ನೋವ ಕಾರಿನಲ್ಲಿ ಹಿಂದೆ ಬರ್ತಿದ್ದ ನಾಲ್ವರು ಪ್ರವೀಣ್ ಕಾರನ್ನು ಅಡ್ಡಗಟ್ಟಿ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.ಹಲ್ಲೆಕೋರರು ಮುಖ ಮೂತಿ ನೋಡದೆ ಕಣ್ಣಲ್ಲಿ ರಕ್ತ ಬರೋ ಹಾಗೆ ಹೊಡೆದಿದ್ದಾರೆ. ಮೂವರು ಪ್ರವೀಣ್ ಮೇಲೆ ಹಲ್ಲೆ ಮಾಡುತ್ತಿದ್ದರೆ, ಮತ್ತೊಬ್ಬ ಪ್ರವೀಣ್ ಅವರ ಸ್ವಿಫ್ಟ್ ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದ್ದಾನೆ.ಸದ್ಯ ಪ್ರವೀಣ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


