ಹಾಸನ: ಹೊಳೆನರಸೀಪುರದಲ್ಲಿ ನಡೆದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದಲ್ಲಿ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಮತ್ತು ಅವರ ಪತ್ನಿ ಚನ್ನಮ್ಮ ಸಿಲುಕಿಕೊಂಡು ಪರದಾಡಿದ ಘಟನೆ ನಡೆದಿದೆ.ಹೆಚ್.ಡಿ.ದೇವೇಗೌಡ, ಪತ್ನಿ ಚನ್ನಮ್ಮ ಹಾಗೂ ಶಾಸಕ ಹೆಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ, ಪುತ್ರ ಸೂರಜ್ ಉತ್ಸವ ಮೂರ್ತಿಗೆ ರಥದ ಮೇಲೆ ಪೂಜೆ ಸಲ್ಲಿಸಿದರು.ರಥ ಎಳೆಯುವ ಸಂದರ್ಭದಲ್ಲಿ ದೇವೇಗೌಡರು ಚಾಲನೆ ನೀಡಿದ ನಂತರ ಭಕ್ತರು ಏಕಾಏಕಿ ರಥವನ್ನು ಎಳೆದರು. ಹೀಗಾಗಿ ಭಕ್ತರ ನೂಕುನುಗ್ಗಲು ಉಂಟಾಗಿ 85 ವರ್ಷದ ದೇವೇಗೌಡರು ಮತ್ತು ಚನ್ನಮ್ಮ ಜನಸಂದಣಿಯಲ್ಲಿ ಸಿಲುಕಿಕೊಂಡಿದ್ರು.ಆಗ ಅಲ್ಲೇ ಇದ್ದ ಹಿರಿಯ ಮಗ ರೇವಣ್ಣ ಓಡಿಬಂದು ದೇವೇಗೌಡರ ಅಂಗರಕ್ಷಕರ ಸಹಾಯದಿಂದ ತಮ್ಮ ತಂದೆ-ತಾಯಿಯನ್ನು ನೂಕುನುಗ್ಗಲಿಂದ ಬಚಾವ್ ಮಾಡಿದ್ರು.ಆದ್ರೆ ನನಗೆ ಏನೂ ಆಗಿಲ್ಲ ಅಂತ ಗೊರೂರಲ್ಲಿ ದೇವೇಗೌಡರು ಸ್ಪಷ್ಟಪಡಿಸಿದ್ರು.Sign in to your account
Username or Email Address


Password

 Remember Me


