ಮಂಡ್ಯ: ಕೇಕ್ ತಿಂದು 5 ಮಕ್ಕಳು ವಾಂತಿ ಭೇದಿಯಿಂದ ನರಳಾಡಿದಂತ ಘಟನೆ ಮಂಡ್ಯದಲ್ಲಿ ನಡೆದಿದೆ.ಬುಧವಾರ ಸಂಜೆ ಮಂಡ್ಯದ ಕೆ.ಎಂ ದೊಡ್ಡಿಯ ಭೈರವೇಶ್ವರ ಬೇಕರಿಯಲ್ಲಿ ಸುತ್ತಮುತ್ತಲ ಗ್ರಾಮದ ಕೆಲವರು ಕೇಕ್ ಖರೀದಿಸಿದ್ದಾರೆ. ಬಳಿಕ ಆ ಕೇಕನ್ನು ಮನೆಗೆ ತೆಗೆದುಕೊಂಡು ಹೋಗಿ ತಮ್ಮ ಮಕ್ಕಳಿಗೆ ತಿನ್ನಿಸಿದ್ದಾರೆ. ಪರಿಣಾಮ ಕೆಎಂ ದೊಡ್ಡಿ ಪಕ್ಕದ ಮಾದರಹಳ್ಳಿ ಗ್ರಾಮದ ಧನುಷ್ (6), ಹುಲಿಗೆರೆಪುರ ಗ್ರಾಮದ ದರ್ಶನ್ (9), ಕೊಳ್ಳೇಗಾಲದ ಶ್ರೇಯ (3), ಅಜ್ಜಳ್ಳಿಯ ಅನುಷಾ (4) ಹಾಗೂ ನಿಶ್ಚಿತ ಕೇಕ್ ತಿಂದು ಅಸ್ವಸ್ಥಗೊಂಡಿದ್ದಾರೆ.ಬಳಿಕ ಆತಂಕಗೊಂಡ ಮಕ್ಕಳ ಪೋಷಕರು ಕೆಎಂ ದೊಡ್ಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಮಿಮ್ಸ್ ನಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.Sign in to your account
Username or Email Address


Password

 Remember Me


