ಬೆಂಗಳೂರು: ರಾಜ್ಯದಲ್ಲಿ `ಕೈ’ ಗೂಂಡಾಗಿರಿ ಕಾರುಬಾರು ಶುರುವಾಗಿದ್ದು, ದೇಗುಲದ ಗೇಟನ್ನೇ ಒಡೆಸಿ ದೇವಸ್ಥಾನವನ್ನೇ ಕಬಳಿಕೆ ಮಾಡಲು ಮಾಜಿ ಕಾರ್ಪೊರೇಟರ್ ಮುಂದಾಗಿದ್ದಾನೆ.ವಾರ್ಡ್ ನಂಬರ್ 90 ಹಲಸೂರಿನ ಮಾಜಿ ಕಾರ್ಪೊರೇಟರ್ ಉದಯ್ ಕುಮಾರ್ ಈ ರೀತಿಯ ಗೂಂಡಾ ವರ್ತನೆ ಮಾಡಿದ್ದು, ದೇಗುಲದ ಭಕ್ತರ ಮುಂದೆಯೇ ಅನ್ಯಧರ್ಮದವರನ್ನು ಬಿಟ್ಟು ದೇಗುಲದ ಗೇಟ್ ಬೀಗವನ್ನು ಒಡೆಸಿದ್ದಾನೆ. ಈತ ಬೆಂಗಳೂರಿನ ಪುರಾತನ ದೇಗುಲದ ಮೇಲೆ ಕಣ್ಣು ಹಾಕಿದ್ದು, ಮುಸ್ಲಿಮರನ್ನು ಕರೆಸಿ ಹಾರೆ, ರಾಡ್ ತೆಗೆದುಕೊಂಡು ಬಂದು ಹಿಂದೂ ದೇಗುಲದ ಕಿಟಕಿ, ಗೇಟ್ ಪುಡಿ ಪುಡಿ ಮಾಡಿಸಿದ್ದಾನೆ.ಹಳೇ ಮದ್ರಾಸ್ ರಸ್ತೆಯಲ್ಲಿರುವ ಮೌನನಂದ ಮಠದ ಜಾಗಕ್ಕೆ ಉದಯ್ ಕುಮಾರ್ ಅತಿಕ್ರಮ ಪ್ರವೇಶ ಮಾಡಿದ್ದು, ದೇಗುಲದ ಜಾಗ ತನ್ನ ಪರಿಚಿತರಿಗೆ ಸೇರಿದ್ದು. ನಂಗೆ ಇದನ್ನು ಡೆಮಾಲಿಷನ್ ಮಾಡೋಕೆ ಕಂಟ್ರಾಕ್ಟ್ ಕೊಟ್ಟಿದ್ದಾರೆ ಎಂದು ಹೇಳಿದ್ದಾನೆ. ಕಾರ್ಪೊರೇಟರ್ ವರ್ತನೆಗೆ ರೊಚ್ಚಿಗೆದ್ದ ಭಕ್ತರು, ನಿಮ್ಮ ವಂಶ ನಿರ್ವಂಶ ಆಗುತ್ತೆ. ಈ ದೇವಸ್ಥಾನ ಅಷ್ಟೊಂದು ಪವರ್ ಫುಲ್ ಎಂದು ಆಕ್ರೋಶದಿಂದ ಹೇಳಿದ್ದಾರೆ.ಆದರೆ ಅಷ್ಟಕ್ಕೆ ಸುಮ್ಮನಾಗದೇ ಅಯ್ಯೋ ಅದೇನ್ ಆಗುತ್ತೋ ನಾನು ನೋಡುತ್ತೀನಿ. ಅದೆಲ್ಲ ನಾನ್ ನಂಬಲ್ಲ ಎಂದು ಮುಸ್ಲಿಮರನ್ನು ಬಿಟ್ಟು ಗೇಟ್ ಬೀಗ ಒಡೆಸಿದ್ದಾನೆ. ಕೊನೆಗೆ ಭಕ್ತರ ಆಕ್ರೋಶ ಹೆಚ್ಚಾದಾಗ ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ. ಜನರ ಆಕ್ರೋಶಕ್ಕೆ ಕಾರ್ಪೊರೇಟರ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.ಮಠದವರು ಮಾಜಿ ಕಾರ್ಪೊರೇಟರ್ ಗೂಂಡಾ ವರ್ತನೆಯ ವಿರುದ್ಧ ಹಳೇ ಮದ್ರಾಸ್ ರಸ್ತೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.Sign in to your account
Username or Email Address


Password

 Remember Me


