ಮಂಗಳೂರು: ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಟಾರ್ಗೆಟ್ ಗ್ರೂಪ್ ಲೀಡರ್ ಇಲ್ಯಾಸ್ ಜೊತೆ ಈ ಹಿಂದೆ ಸಚಿವ ಯು.ಟಿ.ಖಾದರ್ ಭೋಜನ ಮಾಡುತ್ತಿದ್ದ ಫೋಟೊ ವೈರಲ್ ಆಗಿತ್ತು. ಇದೀಗ ಇತ್ತೀಚೆಗೆ ಹತ್ಯೆಯಾದ ಟಾರ್ಗೆಟ್ ಗ್ರೂಪ್ ಲೀಡರ್ ಇಲ್ಯಾಸ್ ಹಂತಕರ ಜೊತೆ ನಿಂತು ಸಚಿವ ಖಾದರ್ ತೆಗೆಸಿಕೊಂಡಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಇಲ್ಯಾಸ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದಾವೂದ್, ಸಮೀರ್, ಉಸ್ಮಾನ್ ಜೊತೆಗಿರುವ ಫೋಟೊ ಈಗ ವೈರಲ್ ಆಗಿದೆ. ಈ ಮೂವರು ಇಲ್ಯಾಸ್ ಹತ್ಯೆ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಸಚಿವ ಯು.ಟಿ.ಖಾದರ್, ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಗಳೊಂದಿಗೆ ನಂಟು ಹೊಂದಿದ್ದಾರೆಂದು ಬಿಂಬಿಸಿ ಜಾಲತಾಣದಲ್ಲಿ ಹರಿಯಬಿಡಲಾಗುತ್ತಿದೆ. ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಉಸ್ಮಾನ್ ಹೆಗಲಿನ ಮೇಲೆ ಖಾದರ್ ಕೈ ಹಾಕಿದ ಕಾರಣ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.ಕಳೆದ ಜನವರಿ 13 ರಂದು ಇಲ್ಯಾಸ್ ನನ್ನು ಆತನ ಮಂಗಳೂರಿನ ಫ್ಲಾಟ್ ಒಂದರಲ್ಲಿ ಹತ್ಯೆ ಮಾಡಲಾಗಿತ್ತು. ಅದಕ್ಕೂ ಮುನ್ನ, ಸಚಿವ ಖಾದರ್ ಆಪ್ತನೆಂದು ಗುರುತಿಸಿಕೊಂಡಿದ್ದ ಇಲ್ಯಾಸ್ ಉಳ್ಳಾಲ ಯುವ ಕಾಂಗ್ರೆಸ್ ಉಪಾಧ್ಯಕ್ಷನೂ ಆಗಿದ್ದ. ಆನಂತರ ರೌಡಿಗಳ ನಡುವಿನ ದ್ವೇಷದಿಂದ ಹತ್ಯೆ ಇಲ್ಯಾಸ್ ಹತ್ಯೆ ಮಾಡಲಾಗಿತ್ತು ಎನ್ನಲಾಗಿದೆ. ಇದೀಗ ಆರೋಪಿಗಳ ಜೊತೆಗಿರುವ ಖಾದರ್ ಫೋಟೊ ಮತ್ತೆ ಹೆಚ್ಚು ಸಂಚಲನ ಉಂಟು ಮಾಡಿದೆ.Sign in to your account
Username or Email Address


Password

 Remember Me


