ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿಯ ಮಾತಿಗೆ ಮೂರು ಕಾಸಿನ ಕಿಮ್ಮತ್ತು ಇಲ್ಲ. ತಮ್ಮ ಸ್ಥಾನ ಮರೆತು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಅಂತಾ ಸಿಎಂ ಸಿದ್ದರಾಮಯ್ಯ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರು.ತಾಲೂಕಿನ ಬಸಾಪುರದ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ, ಮೋದಿಯವರು ಸೀದಾ ರೂಪಾಯಿ ಸರ್ಕಾರ ಎನ್ನುತ್ತಿದ್ದಾರೆ. ಮೋದಿ ಆಧಾರ ಇಲ್ಲದ ಆರೋಪ ಮಾಡುತ್ತಿದ್ದಾರೆ. ಒಬ್ಬ ಪ್ರಧಾನ ಮಂತ್ರಿಯಾಗಿ ಇಷ್ಟು ಕೀಳು ಮಟ್ಟದ ರಾಜಕೀಯ ಮಾಡುತ್ತಿರೋದು ನಾನು ಇಲ್ಲಿಯವರೆಗೆ ಯಾರನ್ನು ನೋಡಿಲ್ಲ. ಇದು ಪ್ರಧಾನ ಮಂತ್ರಿ ಸ್ಥಾನಕ್ಕೆ ಕಳಂಕ ತರುವಂತೆ ಮಾಡುತ್ತಿದೆ ಅಂದ್ರು. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರವಲ್ಲ, ‘ಸೀದಾ ರೂಪಾಯಿ’ ಸರ್ಕಾರ – ಸಿದ್ದುಗೆ ಮೋದಿ ವ್ಯಂಗ್ಯರೈತರನ್ನು ಕೊಂದವರಿಗೆ ಮೋದಿ ರೈತ ಬಂಧು ಅಂತಾ ಬಿರುದು ಕೊಡ್ತಾರೆ. ಹಾವೇರಿಯಲ್ಲಿ ಗೋಲಿಬಾರ್ ಮಾಡಿಸಿ ರೈತರನ್ನು ಕೊಂದವರು ಯಾರು ಎಂದು ಮೋದಿಗೆ ಪ್ರಶ್ನೆ ಮಾಡಿದ್ರು. ಇನ್ನು ನಮ್ಮ ಸರ್ಕಾರದ ಭ್ರಷ್ಟ್ರಚಾರದ ಬಗ್ಗೆ ಮೋದಿ ಮಾತನಾಡ್ತಾರೆ. ಮೊದಲು ಅವರು ದೇಶವನ್ನು ಲೂಟಿ ಹೊಡೆದ ನೀರವ್ ಮೋದಿ, ಲಲಿತ್ ಮೋದಿಯನ್ನು ಸುಮ್ಮನೆ ಬಿಟ್ಟಿದ್ದು ಯಾಕೆ? ಅಲ್ಲದೆ ಇವರೆಲ್ಲರೂ ದೇಶ ಬಿಟ್ಟು ಹೋಗಲು ಮೋದಿಯೇ ಕುಮ್ಮಕ್ಕು ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ರು. ಇದನ್ನೂ ಓದಿ: ನೀಚ ಸಿಎಂ ಬೆಳೆಸಿ ನಾನು ಮಹಾ ಅಪರಾಧ ಮಾಡಿದೆ: ಕನ್ನಡಿಗರಲ್ಲಿ ಕ್ಷಮೆ ಕೇಳಿದ ಎಚ್‍ಡಿಡಿರೈತರ ಸಮಾವೇಶ ಮಾಡುವ ಯಡಿಯೂರಪ್ಪ ಮತ್ತು ಮೋದಿ ಡೋಂಗಿಗಳು. ನನ್ನನ್ನು ರಾಜಕೀಯವಾಗಿ ದೇವೇಗೌಡ್ರು ಬೆಳೆಸಿಲ್ಲ. ನನ್ನ ಸ್ವಂತಿಕೆ ಮೇಲೆ ನಾನೇ ಬೆಳೆದಿದ್ದೇನೆ ಎಂದು ದೇವೇಗೌಡರಿಗೂ ಸಿಎಂ ಟಾಂಗ್ ನೀಡಿದ್ರು.Sign in to your account
Username or Email Address


Password

 Remember Me


