ರಾಮನಗರ: ಮಹಾರಾಷ್ಟ್ರದಲ್ಲಿ (Maharashtra) ಕರ್ನಾಟಕದ (Karnataka) ಬಸ್ (Bus) ಸುಟ್ಟಿರುವ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹೇಳಲಾಗಿದೆ. ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ಪತ್ರ ಬರೆಯಲು ನಮ್ಮ ಮುಖ್ಯ ಕಾರ್ಯದರ್ಶಿಗೆ ಹೇಳಿದ್ದೇವೆ ಎಂದು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದ್ದಾರೆ.ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಪುಂಡಾಟ ಮೆರೆದಿರುವ ವಿಚಾರದ ಕುರಿತು ರಾಮನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಎಂಇಎಸ್‌ನವರು ಹಿಂದೆ ನಾಲ್ಕೈದು ಜನ ಗೆಲ್ಲೋರು. ಈಗ ನಗರ ಪಾಲಿಕೆಯಲ್ಲೂ ಅವರು ಗೆಲ್ಲುತ್ತಿಲ್ಲ, ಎಲ್ಲಾ ಕಡೆ ಸೋಲುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಅವರ ಮೀಸಲಾತಿ ವಿಚಾರಕ್ಕೆ ಹೋರಾಟ ಮಾಡುತ್ತಿದ್ದಾರೆ. ಆದರೆ ಕೆಲವೆಡೆ ಬಸ್ ಸುಟ್ಟಿದ್ದಾರೆ. ಬಸ್ ಸುಡೋದಕ್ಕೂ, ಮೀಸಲಾತಿಗೂ ಯಾವುದೇ ಸಂಬಂಧ ಇಲ್ಲ. ಅವರು ಮೀಸಲಾತಿಗೆ ಹೋರಾಟ ಮಾಡಿಕೊಳ್ಳಲಿ. ಆದರೆ ಈ ರೀತಿಯ ಉದ್ಧಟತನ ಸರಿಯಿಲ್ಲ ಎಂದು ಕಿಡಿಕಾರಿದರು.ನಮ್ಮ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ಪತ್ರ ಬರೆಯಲು ಹೇಳಿದ್ದೇವೆ. ಅವರು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ಪತ್ರ ಬರೆಯಲಿದ್ದಾರೆ. ಯಾರು ಬಸ್ ಸುಟ್ಟಿದ್ದಾರೆ ಅವರ ವಿರುದ್ಧ ಕ್ರಮಕ್ಕೆ ಹೇಳಿದ್ದೇನೆ. ಅವರ ಬಸ್‌ಗಳು ಕೂಡಾ ನಮ್ಮ ಕಡೆ ಬರುತ್ತಲ್ಲ, ನಮ್ಮವರು ಏನಾದ್ರೂ ಮಾಡ್ತಾರಾ? ಮೀಸಲಾತಿ ಹೋರಾಟ ಅವರ ಆಂತರಿಕ ವಿಚಾರ. ಆದರೆ ನಮ್ಮ ಬಸ್‌ಗಳಿಗೆ ಹಾನಿ ಮಾಡ್ತಿರೋದು ತಪ್ಪು. ಯಾರೋ ಕಿಡಿಗೇಡಿಗಳು ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಆಗುತ್ತದೆ ಎಂದರು. ಇದನ್ನೂ ಓದಿ: ವನ್ಯಜೀವಿಗಳ ವಸ್ತುಗಳನ್ನಿಟ್ಟುಕೊಂಡವರು 2-3 ತಿಂಗಳಲ್ಲಿ ವಾಪಸ್ ಮಾಡಬೇಕು: ಡೆಡ್‌ಲೈನ್ ನೀಡಿದ ಖಂಡ್ರೆಪ್ರತ್ಯೇಕ ರಾಜ್ಯದ ಬಗ್ಗೆ ಕೆಲವರ ಪ್ರತಿಭಟನೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತ್ಯೇಕ ರಾಜ್ಯ ಅನ್ನೋದು ಮುಗಿದ ಕಥೆ. ಕನ್ನಡ ಮಾತನಾಡುವ ಭಾಷಿಗರೆಲ್ಲಾ ಒಂದೇ. ರಾಜ್ಯ ಸ್ಥಾಪನೆ ಆಗಿ ಈಗಾಗಲೇ 67 ವರ್ಷ ಮುಗಿದಿದೆ. ಪ್ರತ್ಯೇಕ ರಾಜ್ಯದ ಪ್ರಶ್ನೆಯೇ ಇಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ನಿಷ್ಠಾವಂತರು, ಸಿಎಂ ಆಗಲು ಅರ್ಹರಿದ್ದಾರೆ – ಸಚಿವ ಕೆ.ಎನ್ ರಾಜಣ್ಣWeb Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


