ಬೆಂಗಳೂರು: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಆಕೆಯ ಗುಪ್ತಾಂಗಕ್ಕೆ ಚಾಕು ಹಾಕಲು ಯತ್ನಿಸಿದ ಘಟನೆ ಬೆಂಗಳೂರಿನ ಆನೆಪಾಳ್ಯ ಮುಖ್ಯರಸ್ತೆಯಲ್ಲಿ ನಡೆದಿದೆ.ನದೀಮ್ ಪಾಷಾ ಕೊಲೆ ಮಾಡಲು ಯತ್ನಿಸಿದ ಆರೋಪಿ. ನದೀಮ್ 5 ವರ್ಷಗಳ ಹಿಂದೆ ಆಯಿಷಾಳನ್ನು ಮದುವೆಯಾಗಿದ್ದನು. ಆದರೆ ಆಯಿಷಾ ಬೇರೊಬ್ಬನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಳು. ಕಳೆದ ವಾರ ತಡರಾತ್ರಿ ಮನೆಗೆ ಬಂದಾಗ ಗೆಳೆಯನ ಜೊತೆ ಆಯಿಷಾ ಸಿಕ್ಕಿ ಬಿದ್ದಿದ್ದಳು.ಪತ್ನಿ ಬೇರೊಬ್ಬ ಪುರುಷನ ಜೊತೆ ಇರುವುದನ್ನು ಕಣ್ಣಾರೆ ಕಂಡ ನದೀಮ್ ಪಾಷಾ ಆತನ ಮೇಲೆ ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ಆತ ತಪ್ಪಿಸಿಕೊಳ್ಳಲು ಆಯಿಷಾ ನೆರವಾಗಿದ್ದಳು.ಇದಾದ ಬಳಿಕ ನದೀಮ್ ತನ್ನ ಪತ್ನಿ ಆಯಿಷಾ ಮೇಲೆ ದ್ವೇಷ ಬೆಳೆಸಿಕೊಂಡಿದ್ದ. ತನಗೆ ಮೋಸ ಮಾಡಿದವಳಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಫೆ.24ರ ಬೆಳಗ್ಗೆ ಪತ್ನಿಯ ಚಾಕು ಹಾಕಲು ಯತ್ನಿಸಿದ್ದನು. ಎರಡೂ ಕಾಲಿನ ತೊಡೆಗೆ ಚಾಕು ಹಾಕಿ ಕೊಲೆ ಮಾಡಲು ಯತ್ನಿಸಿದ್ದಾನೆ.ಆಯಿಷಾ ದೇಹದ 12 ಕಡೆ ನದೀಮ್ ಚಾಕುವಿನಿಂದ ಚುಚ್ಚಿದ್ದ. ಗಾಯಗೊಂಡಿದ್ದ ಆಯಿಷಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿ ನದೀಮ್ ಪಾಷಾನನ್ನು ಪೊಲೀಸರು ಈಗ ಬಂಧಿಸಿದ್ದಾರೆ.Sign in to your account
Username or Email Address


Password

 Remember Me


