ಮಂಗಳೂರು: ರಸ್ತೆಗೆ ಅಡ್ಡಲಾಗಿ ಬಂದ ದನವೊಂದಕ್ಕೆ ಡಿಕ್ಕಿಯಾಗೋದನ್ನು ತಪ್ಪಿಸಲು ಹೋಗಿ ಕಾರೊಂದ ಪಲ್ಟಿ ಹೊಡೆದಿದೆ. ಕಾರ್ ಪಲ್ಟಿಯಾದ್ರೂ ಚಾಲಕ ಬಶೀರ್ ಪವಾಡ ಸದೃಶವಾಗಿ ಬದುಕುಳಿದಿದ್ದಾರೆ.ಮಂಗಳೂರಿನ ತಲಪಾಡಿ ನಿವಾಸಿ ಬಶೀರ್ ಎಂಬವರು ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಬಂಟ್ವಾಳದ ಪೊನ್ನೋಡಿ ಎಂಬಲ್ಲಿ ದನವೊಂದು ರಸ್ತೆಗೆ ಅಡ್ಡಲಾಗಿ ಬಂದಿದೆ. ದನಕ್ಕೆ ಕಾರ್ ಡಿಕ್ಕಿಯಾಗೋದನ್ನು ತಪ್ಪಿಸಲು ಮುಂದಾದಹ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಅದೃಷ್ಟವಶಾತ್ ಬಶೀರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಕಾರು ಪಲ್ಟಿಯಾದ ದೃಶ್ಯ ಅಪಘಾತದ ತೀವ್ರತೆಯನ್ನು ತೋರಿಸುತ್ತದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.Sign in to your account
Username or Email Address


Password

 Remember Me


