ತುಮಕೂರು: ಮದುವೆ ಮಂಟಪದಲ್ಲೇ ವಧು ವರರು ಕನ್ನಡ ಚಿತ್ರದ ಹಾಡೊಂದಕ್ಕೆ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದ ಅಪರೂಪದ ಘಟನೆ ತುಮಕೂರಿನಲ್ಲಿ ನಡೆದಿದೆ.ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕಾಂಗ್ರೆಸ್ ಮುಖಂಡ ಕೃಷ್ಣೆಗೌಡರ ಪುತ್ರಿ ಮಾನಸ ಅವರಿಗೆ ಮಂಜುನಾಥ ಜೊತೆ ಹುಳಿಯಾರಿನ ಸೇವಾಲಾಲ್ ಸದನದಲ್ಲಿ ವಿವಾಹ ಮಹೋತ್ಸವ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಧು ವರರಿಬ್ಬರೂ ಅಲ್ಲಾಡ್ಸ್ ಅಲ್ಲಾಡ್ಸ್ ಅಲ್ಲಾಡ್ಸ್ ಹಾಡಿಗೆ ಮಂಟಪದಲ್ಲೇ ಕುಣಿದು ನೆರೆದವರನ್ನು ರಂಜಿಸಿದ್ದಾರೆ.ವಧು ಮಾನಸ, ವರ ಮಂಜುನಾಥ ಕೈಕೈ ಹಿಡಿದು ಸಖತ್ ಸ್ಟೆಪ್ ಹಾಕಿದ್ದಾರೆ. ಈ ನವ ಜೋಡಿಗೆ ಇತರೆ ಸ್ನೇಹಿತರು ಸಾಥ್ ಕೊಟ್ಟಿದ್ದಾರೆ. ಇದರ ಜೊತೆಗೆ ಇನ್ನೊಂದು ವಿಶೇಷ ಕ್ಷಣಕ್ಕೆ ಈ ಮದುವೆ ಸಾಕ್ಷಿಯಾಗಿತ್ತು. ಸಪ್ತಪದಿ ತುಳಿದ ಮರುಘಳಿಗೆಯಲ್ಲೇ ನವದಂಪತಿ ಕಣ್ಣುದಾನ ಮಾಡಿ ಗಮನ ಸೆಳೆದರು.ಕಣ್ಣುದಾನ ಮಾಡುವುದಾಗಿ ಪತ್ರಕ್ಕೆ ಸಹಿ ಹಾಕಿ ದಂಪತಿ ಆದರ್ಶ ಮೆರೆದಿದ್ದಾರೆ.https://www.youtube.com/watch?v=bmRG9jufs2ASign in to your account
Username or Email Address


Password

 Remember Me


