ಬೆಂಗಳೂರು: ಶಾಂತಿನಗರ ಕ್ಷೇತ್ರದ ಶಾಸಕ ಎನ್‍ಎ ಹ್ಯಾರಿಸ್ ಮಗ, ರೌಡಿ ಮಹಮ್ಮದ್ ನಲಪಾಡ್ ಜೈಲಿಂದ ರಿಲೀಸ್ ಆಗ್ತಾನೋ ಇಲ್ವೋ ಅನ್ನೋದು ಇಂದು ಗೊತ್ತಾಗುತ್ತೆ.ಆರೋಪಿ ನಲಪಾಡ್ ಸಲ್ಲಿಸಿರೋ ಜಾಮೀನು ಅರ್ಜಿ ವಿಚಾರಣೆ ಇಂದೂ ಕೂಡ ಮುಂದುವರಿಯಲಿದೆ. ನಾನು ಅಮಾಯಕ, ರಾಜಕೀಯ ಒತ್ತಡಕ್ಕೆ ಮಣಿದು ನನ್ನ ಮೇಲೆ ಇಲ್ಲ-ಸಲ್ಲದ ಕೇಸೆಲ್ಲಾ ಹಾಕಿದ್ದಾರೆ. ಹೀಗಾಗಿ ಜಾಮೀನು ನೀಡಿ ಅನ್ನೋದು ನಲಪಾಡ್ ವಾದವಾಗಿದೆ. ಇದನ್ನೂ ಓದಿ: ಜೈಲಿನಲ್ಲಿ ನಲಪಾಡ್ ರಂಪಾಟ- ಜಾಮೀನು ಸಿಗದ್ದಕ್ಕೆ ಪೋಷಕರಿಗೆ ಕರೆ ಮಾಡಿ ಕೂಗಾಟಜೈಲಿನಲ್ಲಿದ್ರೂ ನಲಪಾಡ್ ಫೆಸಿಲಿಟಿ ಏನೂ ಕಡಿಮೆ ಆಗಿಲ್ಲ. ಭಾನುವಾರ ರಾತ್ರಿ ಮೂರ್ನಾಲ್ಕು ಬಾರಿ ಅಪ್ಪ, ಶಾಸಕ ಹ್ಯಾರಿಸ್‍ಗೆ ಫೋನ್ ಮಾಡಿದ್ದ ನಲಪಾಡ್ ಇಂದಾದ್ರೂ ನನ್ನನ್ನು ಜೈಲಿಂದ ರಿಲೀಸ್ ಮಾಡಿಸಿ ಅಂತ ದುಂಬಾಲು ಬಿದ್ದಿದ್ದಾನೆ. ನನಗೆ ಜೈಲಲ್ಲಿ ಇರೋಕೆ ಆಗ್ತಿಲ್ಲ ಅಂತ ಗೋಗರೆಯುತ್ತಿದ್ದಾನೆ ಎನ್ನಲಾಗಿದೆ.ಇತ್ತ ಭಾನುವಾರವಾದ್ರೂ ನಿನ್ನೆ ಜೈಲು ಸಿಬ್ಬಂದಿ ನಲಪಾಡ್‍ಗೆ ಹೊರಗಡೆ ಊಟದ ವ್ಯವಸ್ಥೆ ಮಾಡಿದ್ದಾರೆ. ಪ್ರಕರಣದ ನಾಲ್ಕನೇ ಆರೋಪಿ ಮಂಜುನಾಥ್ ಗೆ ಮನೆಯಿಂದ ಊಟದ ವ್ಯವಸ್ಥೆ ಆಗಿತ್ತು ಎಂದು ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಜೈಲಿಗೆ ಹೋದ ಎರಡೇ ದಿನಕ್ಕೆ ನಲಪಾಡ್ ಕೈಗೆ ಸಿಕ್ತು ಮೊಬೈಲ್ ಫೋನ್!https://www.youtube.com/watch?v=CYsc3iZ73N4Sign in to your account
Username or Email Address


Password

 Remember Me


