ಬೆಂಗಳೂರು: ಸಾರ್ವಜನಿಕ ಉದ್ಯಾನವನದಲ್ಲಿ ಹಾಡಹಗಲೇ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ ಈಗ ಪೊಲೀಸರ ಆತಿಥಿಯಾಗಿದ್ದಾನೆ.ಈ ಘಟನೆ ಫೆಬ್ರವರಿ 21 ರಂದು ನಗರದ ಮತ್ತಿಕೆರೆಯ ಜೆಪಿ ಪಾರ್ಕ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೆಎಸ್‍ಆರ್ ಟಿಸಿ ಬಸ್ ಚಾಲಕನಾಗಿರೋ ಶ್ಯಾಮ್ ಎಂಬಾತ ಈ ಕೃತ್ಯ ಎಸಗಿದ್ದಾನೆ.ನಡೆದಿದ್ದೇನು?: ಫೆಬ್ರವರಿ 21ರಂದು ರಂದು ಗೃಹಿಣಿಯೊಬ್ಬರು ವಾಯುವಿಹಾರಕ್ಕೆಂದು ಮತ್ತಿಕೆರೆಯ ಜೆಪಿ ಪಾರ್ಕ್ ಗೆ ಬೆಳಗ್ಗೆ ಸುಮಾರು 11.30ಕ್ಕೆ ಹೋಗಿದ್ದಾರೆ. ಗೃಹಿಣಿ ಪಾರ್ಕ್‍ನ ಒಳಭಾಗದಲ್ಲಿ ಹೋಗಿ ವಾಯುವಿಹಾರ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆರೋಪಿ ಶ್ಯಾಮ್ ಬಂದು ಏಕಾಏಕಿ ಆಕೆಯ ಕೈ ಹಿಡಿದು ಎಳೆದುಕೊಂಡು ಪಕ್ಕದಲ್ಲಿದ್ದ ಪೊದೆಯೊಳಗೆ ಹೋಗಿದ್ದಾನೆ. ಸಂತ್ರಸ್ತೆಯನ್ನು ತಬ್ಬಿಕೊಂಡು ಕೂಗಾಡಲು ಬಿಡದಂತೆ ಬಾಯಿಯನ್ನ ಮುಚ್ಚಿದ್ದಾನೆ. ಬಳಿಕ ಗೃಹಿಣಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ.ಸಂತ್ರಸ್ತೆ ಕೂಗಾಡಿದ್ದರಿಂದ ಯಾರಿಗಾದರೂ ಈ ವಿಚಾರ ಹೇಳಿದರೆ ಕೊಲೆ ಮಾಡುತ್ತೀನಿ ಎಂದು ಜೀವ ಬೆದರಿಕೆ ಹಾಕಿದ್ದು, ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ಅಷ್ಟರಲ್ಲಿ ಅಲ್ಲೇ ಪಾರ್ಕ್‍ನಲ್ಲಿದ್ದ ಸಾರ್ವಜನಿಕರು ಸಂತ್ರಸ್ತೆಯ ಸಹಾಯಕ್ಕೆ ದೌಡಾಯಿಸಿದ್ದಾರೆ. ನಂತರ ಸಾರ್ವಜನಿಕರ ಆರೋಪಿಯನ್ನ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಈ ಘಟನೆ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಶ್ಯಾಮ್ ನನ್ನು ಬಂಧಿಸಿದ್ದಾರೆ. 






 Advertisement 




Sign in to your account
Username or Email Address


Password

 Remember Me


