ಮೈಸೂರು: ಕುಡಿದ ಮತ್ತಿನಲ್ಲಿ ತಮ್ಮನ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದಕ್ಕೆ, ಗ್ರಾಮಸ್ಥರು ತಮ್ಮನ ಪತ್ನಿಯನ್ನೆ ಅಣ್ಣನ ಜೊತೆ ಮದುವೆ ಮಾಡಿಸಿರುವ ವಿಚಿತ್ರ ಘಟನೆ ಚನ್ನರಾಯಪಟ್ಟಣದ ಶಿವಪುರದಲ್ಲಿ ನಡೆದಿದೆ.ಮೈಸೂರಿನ ಹೆಚ್.ಡಿ.ಕೋಟೆಯ ನಿವಾಸಿ ರಾಜೇಶ್ ಅಸಭ್ಯವಾಗಿ ವರ್ತಿಸಿದ ಅಣ್ಣ. ತಮ್ಮನ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಿಂದ ಡಿಸೆಂಬರ್ ನಲ್ಲಿ ಶಿವಪುರ ಗ್ರಾಮದ ಮುಖಂಡರು ಮದುವೆ ಮಾಡಿಸಿದ್ರು. ಆದ್ರೆ ಮದುವೆಯ ಬಳಿಕ ರಾಜೇಶ್ ತಮ್ಮನ ಪತ್ನಿಯೊಂದಿಗೆ ಸಂಸಾರ ನಡೆಸಲು ನಿರಾಕರಿಸಿದ್ದನು. ಒಂದು ವೇಳೆ ಸಂಸಾರ ನಡೆಸದೇ ಇದ್ದರೆ ಎರಡೂವರೆ ಲಕ್ಷ ರೂ. ದಂಡ ನೀಡಬೇಕು ಎಂದು ಗ್ರಾಮಸ್ಥರು ಒತ್ತಡ ಹಾಕಿದ್ದರು ಎನ್ನಲಾಗಿದೆ.ರಾಜೇಶ್ ಈ ಮೊದಲೇ ಮದುವೆಯಾಗಿದ್ದು, ಎರಡು ಮಕ್ಕಳು ಸಹ ಇವೆ. ಶಿವಪುರ ಗ್ರಾಮಸ್ಥರ ಒತ್ತಡದಿಂದಾಗಿ ಡೆತ್ ನೋಟ್ ಬರೆದಿಟ್ಟು ರಾಜೇಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ರಾಜೇಶ್‍ರನ್ನ ಹೆಚ್.ಡಿ .ಕೋಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ರಾಜೇಶ್ ಪತ್ನಿ ಶಿವಪುರ ಗ್ರಾಮಸ್ಥರ ವಿರುದ್ಧ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳದಲ್ಲಿಯೂ ರಾಜೇಶ್ ತಮ್ಮನೂ ಸಹ ಇದ್ದು, ತನ್ನ ಅಕ್ರಮ ಸಂಬಂಧವನ್ನು ಮರೆ ಮಾಚಲು ಪತ್ನಿಯನ್ನು ಅಣ್ಣನೊಂದಿಗೆ ಮದುವೆ ಮಾಡಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.







 Advertisement 




Sign in to your account
Username or Email Address


Password

 Remember Me


