ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೆ ಸರ್ಕಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ನೀಡಿದೆ ಎಂಬ ಮಾಹಿತಿ ಲಭಿಸಿದೆ.ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ರವಿ ಡಿ ಚೆನ್ನಣ್ಣನವರ್ ಅವರನ್ನು ಬೆಂಗಳೂರು ಪಶ್ಚಿಮ ವಿಭಾಗದ ಅನುಚೇತ್ ಅವರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಈಶಾನ್ಯ ವಿಭಾಗದ ಗಿರೀಶ್ ಅವರಿಗೆ ಮಂಡ್ಯ ಎಸ್ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.ಚುನಾವಣಾ ಆಯೋಗದ ನೀಡಿರುವ ನಿರ್ದೇಶನ ಮೇರೆಗೆ ವರ್ಗಾವಣೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಕೈಗೊಳ್ಳಲಾಗಿದೆ ಎನ್ನಲಾಗಿದೆ. ನ್ಯಾಯ ಸಮ್ಮತ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಈ ವರ್ಗಾವಣೆ ಕೈಗೊಳ್ಳಲಾಗಿದೆ. ಸೋಮವಾರ ಬೆಳಗ್ಗೆ ಅಧಿಕಾರಿಗಳ ವರ್ಗಾವಣೆಗೆ ಅಧಿಕೃತ ವರ್ಗಾವಣೆ ಪತ್ರ ಲಭಿಸುವ ಸಾಧ್ಯತೆ ಎಂದು ಮೂಲಗಳು ಖಚಿತ ಪಡಿಸಿದೆ.ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ:
ಗೃಹ ಕಾರ್ಯದರ್ಶಿ – ಉಮೇಶ್ ಕುಮಾರ್
ರವಿ ಚನ್ನಣ್ಣನವರ್ – ಡಿಸಿಪಿ, ಪಶ್ಚಿಮ ಬೆಂಗಳೂರು
ಅಮಿತ್ ಸಿಂಗ್ – ಮೈಸೂರು ಎಸ್ಪಿ.
ಗಿರೀಶ್ – ಮಂಡ್ಯ ಎಸ್ಪಿ.
ಜಗದೀಶ್ – ಬಳ್ಳಾರಿ ಎಸ್ಪಿ
ಬಳ್ಳಾರಿ ವಲಯ ಐಜಿಪಿ – ಎಸ್.ರವಿ.
ಕೇಂದ್ರ ವಲಯ ಐಜಿಪಿ – ದಯಾನಂದ್.
ಸೌಮೇಂದ್ರ ಮುಖರ್ಜಿ – ದಕ್ಷಿಣ ವಲಯ ಐಜಿಪಿ
ಅನುಚೇತ್ – ಸಿಐಡಿ
ಶಿವಪ್ರಸಾದ್- ಕೆಎಸ್‍ಆರ್  ಟಿಸಿ ವಿಜಿಲೆನ್ಸ್
ಅಮೃತಪೌಲ್- ಐಜಿಪಿ, ಆಡಳಿತ
ಕುಲ್‍ದೀಪ್ ಜೈನ್ – ಕೆಎಸ್‍ಆರ್  ಟಿಸಿ, ಕಮಾಂಡೆಂಟ್
ರಾಧಿಕ – ಎಸ್‍ಪಿ, ಎಸಿಪಿ
ಅನುಪ್ ಶೆಟ್ಟಿ – ಎಸ್‍ಪಿ, ಗುಪ್ತಚರ ಇಲಾಖೆ
ರೇಣುಕ ಸುಕುಮಾರ್- ಎಸ್‍ಪಿ, ಕೊಪ್ಪಳ
ಕಲಾ ಕೃಷ್ಣಮೂರ್ತಿ – ಡಿಸಿಪಿ, ಈಶಾನ್ಯ ಬೆಂಗಳೂರು
ಚೇತನ್ – ಎಸ್‍ಪಿ, ದಾವಣಗೆರೆhttps://www.youtube.com/watch?v=ZRLxRuJJEi4Sign in to your account
Username or Email Address


Password

 Remember Me


