ವಿಜಯಪುರ: ಇತ್ತೀಚೆಗೆ ಹೈದ್ರಾಬಾದ್ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಲ್ಮಲಾದಲ್ಲಿರುವ ಮೌಲಾಸಾಬ್ ಅಂಗಡಿಯಲ್ಲಿ ಬಿಸಿ ಬಿಸಿ ಮಿರ್ಚಿ ತಿಂದು ಗಮನ ಸೆಳೆದಿದ್ರು. ಈ ಬಾರಿಯ ಜನಾಶೀರ್ವಾದ ಯಾತ್ರೆಯಲ್ಲಿಯೂ .ವಿಜಯಪುರದ ಚಿಕ್ಕ ಹೋಟೆಲ್ ಗೆ ತೆರಳಿ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಟೀ ಬಿಸ್ಕೇಟ್ ಸವಿದಿದ್ದಾರೆ.ವಿಜಯಪುರದ ಸಕೀಟ್ ಹೌಸ್ ಸಮೀಪದ ಸಲೀಂ ಎಂಬವರ ಟೀ ಶಾಪ್‍ಗೆ ರಾಹುಲ್ ಅಂಡ್ ಟೀಂ ದಿಡೀರ್ ಎಂಟ್ರಿ ಕೊಟ್ಟರು. ರಾಹುಲ್ ಗಾಂಧಿ ತಮ್ಮ ಟೀಂ ಜೊತೆ ಹೋಟೆಲ್ ನಲ್ಲಿ ಟೀ, ಬಿಸ್ಕೇಟ್ ಸೇವನೆ ಮಾಡಿದರು. ಟೀ ಬಿಸ್ಕೇಟ್ ನಂತರ ಸಿಎಂ ಟೀ ಅಂಗಡಿ ಮಾಲೀಕ ಸಲೀಂಗೆ 2000 ರೂಪಾಯಿ ಕೊಟ್ಟರು. ಇನ್ನೊಬ್ಬರು 500 ರೂಪಾಯಿ ಕೊಡಲು ಮುಂದಾದ್ರು. ಆದ್ರೆ ಇದನ್ನು ತಡೆದ ಸಿಎಂ, ಏಯ್ ತಗೊಳಪ್ಪ ತಗೋ ಎಂದು 2000 ನೀಡಿದರು. ಸಲೀಂ ಬೇಡ ಅಂದ್ರೂ ಕೇಳಲಿಲ್ಲ. ಈ ಬಾರಿಯೂ ರಾಹುಲ್ ಯಾತ್ರೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ತಿಕೋಟಾದಿಂದ ಬರಬೇಕಾದ್ರೆ ದಾರಿಯುದ್ದಕ್ಕೂ ರಾಹುಲ್‍ರನ್ನು ನೋಡಲು ಮುಗಿಬಿದ್ದಿದ್ರು. ಇದನ್ನೂ ಓದಿ: ರಸ್ತೆ ಬದಿ ಹೋಟೆಲ್ ನಲ್ಲಿ ಮಿರ್ಚಿ ಬಜ್ಜಿ ತಿಂದು ಟೀ ಕುಡಿದ ರಾಹುಲ್ ಗಾಂಧಿಇದೆಲ್ಲದರ ನಡುವೆಯೂ ರಾಹುಲ್ ಗಾಂಧಿ ಅಲ್ ಅಮೀನ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಸೆಲ್ಫಿಗೆ ಪೋಸ್ ನೀಡಿದ್ರು. ಇದೆಲ್ಲದರ ನಡುವೆ, ರಾಹುಲ್ ಯಾತ್ರೆಯಲ್ಲಿ ಆಂಬ್ಯುಲೆನ್ಸ್ ಸಿಲುಕಿ ರೋಗಿ ಪರದಾಡಿದ ಘಟನೆಯೂ ನಡೆಯಿತು.Sign in to your account
Username or Email Address


Password

 Remember Me


